ಬಿಆರ್‌ಟಿ ಧಾಮದಲ್ಲಿ ಬೆಂಕಿ ಕಾಣಿಸಿಕೊಂಡು ನಾಶವಾಗಿರುವ ಅರಣ್ಯ ಪ್ರದೇಶ.
- ಅಲ್ಪ ಪ್ರಮಾಣದಲ್ಲಿ ಅರಣ್ಯ ನಾಶ
ಹನೂರು: ತಾಲೂಕಿನ ಲೊಕ್ಕನಹಳ್ಳಿ ಸಮೀಪದ ಬಿಆರ್‌ಟಿ ಧಾಮದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡು ಅಲ್ಪ ಪ್ರಮಾಣದಲ್ಲಿ ಅರಣ್ಯ ನಾಶವಾಗಿದೆ.
ಬೇಸಿಗೆ ಹಿನ್ನೆಲೆ ಈ ಅರಣ್ಯ ಪ್ರದೇಶ ಬಹುತೇಕ ಒಣಗಿದ್ದು, ಇತ್ತೀಚೆಗೆ ಮರಗಳು ಚಿಗುರಲು ಆರಂಭಿಸಿವೆೆ. ಆದರೆ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ತಿಳಿದ ಗಸ್ತಿನಲ್ಲಿದ್ದ ಸಿಬ್ಬಂದಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಅವಘಡದಿಂದ ಕುರುಚಲು ಸಸ್ಯಗಳು ಹಾಗೂ ಕೆಲವು ಮರಗಿಡಗಳು ನಾಶವಾಗಿದೆ. ಬೆಂಕಿ ತಡೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಗಾ ವಹಿಸಿದ್ದಾರೆ.