ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮಗಳ ಫಲಾನುಭವಿಗಳಿಗೆ ಗಣೇಶ್ ಪ್ರಸಾದ್ ಸೋಲಾರ್ ದೀಪ ವಿತರಿಸಿದರು. ಎಸ್.ಪ್ರಭಾಕರನ್, ಬಿ.ಎಂ.ಮಲ್ಲೇಶ್, ಎಚ್.ಎಸ್.ನಂಜುಂಡಪ್ರಸಾದ್, ಎಚ್.ಎಸ್.ನಂಜಪ್ಪ, ಜಿ.ಕೆ.ಲೋಕೇಶ್ ಇದ್ದರು. 
ಚಾಮರಾಜನಗರ

ಕಾಡಂಚಿನ ಜನರ ಶ್ರೇಯೋಭಿವೃದ್ಧಿಗೆ ಅರಣ್ಯ ಇಲಾಖೆ ಶ್ರಮ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಎಂ.ಗಣೇಶ್ ಪ್ರಸಾದ್
  • ಗೋಪಾಲಸ್ವಾಮಿಬೆಟ್ಟದ ತಪ್ಪಲಿನ ಹಗ್ಗದಹಳ್ಳ ಹಾಗೂ ಲಕ್ಕೀಪುರ ಕಾಲನಿ
ಗುಂಡ್ಲುಪೇಟೆ: ಕಾಡಂಚಿನ ಗ್ರಾಮಗಳ ಜನರನ್ನು ಮುಖ್ಯವಾಹಿನಿಗೆ ತರಲು ಅರಣ್ಯ ಇಲಾಖೆ ಶ್ರಮಿಸುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬಂಡೀಪುರ ಕಾಡಂಚಿನ ಗ್ರಾಮಗಳಾದ ತಾಲೂಕಿನ ಗೋಪಾಲಸ್ವಾಮಿಬೆಟ್ಟದ ತಪ್ಪಲಿನ ಹಗ್ಗದಹಳ್ಳ ಹಾಗೂ ಲಕ್ಕೀಪುರ ಕಾಲನಿಯ 50 ಫಲಾನುಭವಿಗಳಿಗೆ ಸೋಲಾರ್ ದೀಪ ವಿತರಣೆ ಮಾಡಲಾಗುತ್ತಿದೆ. ರಾತ್ರಿ ವೇಳೆ ವನ್ಯಜೀವಿಗಳ ತೊಂದರೆಯಿಂದ ಪಾರು ಮಾಡಲು ಮೇಲುಕಾಮನಹಳ್ಳಿ, ಲಕ್ಕೀಪುರ ಹಾಗೂ ಹಗ್ಗದಹಳ್ಳ ಗ್ರಾಮಗಳಲ್ಲಿ ಈಗಾಗಲೇ 5 ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಅರಣ್ಯ ಇಲಾಖೆಯು ಬಂಡೀಪುರ ಟೈಗರ್ ಕನ್ಸರ್ವೇಷನ್ ಫಂಡ್ ಅನುದಾನದಿಂದ ಕಾಡಂಚಿನ ಗ್ರಾಮಗಳ ಜನರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಂಡೀಪುರ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ಎಸ್.ಪ್ರಭಾಕರನ್, ಗೋಪಾಲಸ್ವಾಮಿಬೆಟ್ಟ ವಲಯರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಭೂನ್ಯಾಯ ಮಂಡಲಿಯ ಸದಸ್ಯ ಜಿ.ಕೆ.ಲೋಕೇಶ್ ಸೇರಿದಂತೆ ಹಲವರು ಇದ್ದರು.