ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಭಾನುವಾರ ಶ್ರೀ ಗಣೇಶ ಸಿಲ್ಕ್ಸ್ ಮಾಲೀಕ ಎಂ.ಪ್ರಭು ಮಾದವನ್ ಹಾಗು ಸಿಬ್ಬಂದಿ ವತಿ ಯಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. 
ಚಾಮರಾಜನಗರ

ಶ್ರೀ ಗಣೇಶ ಸಿಲ್ಸ್ಕ್‌ನಿಂದ ಅನ್ನಸಂತರ್ಪಣೆ

ಕೊಳ್ಳೇಗಾಲ: ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಭಾನುವಾರ ಶ್ರೀ ಗಣೇಶ ಸಿಲ್ಸ್ಕ್ ವತಿಯಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಪಟ್ಟಣದ ಬಸ್ ನಿಲ್ದಾಣದ ಸಮೀಪವಿರುವ ಶ್ರೀ ಗಣೇಶ ಸಿಲ್ಕ್ಸ್ ಮಳಿಗೆ ಮುಂಭಾಗದಲ್ಲಿ ಮಾಲೀಕರಾದ ಎಂ.ಪ್ರಭು ಮಾದವನ್ ಹಾಗೂ ಅಂಗಡಿ ಸಿಬ್ಬಂದಿ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡಿದರು.
ಬಳಿಕ ಶ್ರೀ ಗಣೇಶ ಸಿಲ್ಕ್ಸ್ ಮಾಲೀಕ ಎಂ.ಪ್ರಭು ಮಾದವನ್ ಮಾತನಾಡಿ, ಪ್ರತಿ ವರ್ಷ ಶಿವರಾತ್ರಿ ಹಾಗೂ ದಸರಾ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನ್ನದಾನ ವಿತರಣೆ ಮಾಡಲಾಗುತ್ತದೆ. ಶಕ್ತಿದೇವ ಶಿವನ ಕೃಪೆ ಎಲ್ಲರ ಮೇಲಿರಲಿ ಎಂದರು.
ಗಣೇಶ ಸಿಲ್ಕ್ಸ್ ಮಾಲೀಕ ಎಂ.ಪ್ರಭು ಅವರ ಪತ್ನಿ ದೀಪಿಕಾ, ಮೌಶಿಕ, ನವನೇಶ್, ಯುಗನ್, ನಿಖಿತಾ, ಸೀಮಾ, ಅಕ್ಷತಾ, ರಶ್ಮಿ, ಮೇಘನಾ, ಮಮತಾ, ರಾಧಾ, ಸುಮಿತ್ರಾ ಕುಮಾರಿ ಮತ್ತಿತರರಿದ್ದರು.