ಹನೂರು: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹನೂರು ತಾಲೂಕು ಕಾರ್ಯಕಾರಿ ಸಮಿತಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಐವರು ಪುರುಷರು ಹಾಗೂ ಇಬ್ಬರು ಮಹಿಳಾ ಶಿಕ್ಷಕರು ಆಯ್ಕೆಯಾಗಿದ್ದಾರೆ.
ಸಾಮಾನ್ಯ ವರ್ಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಿನ್ನಳ್ಳಿಯ ಕೃಷ್ಣೇಗೌಡ ಅವರು 217 ಮತ, ಮಂಗಲ ಸರ್ಕಾರಿ ಶಾಲೆಯ ಎಂ. ಗಿರೀಶ್ 195 ಮತ, ಮರೂರು ಸರ್ಕಾರಿ ಶಾಲೆಯ ಆರ್. ಮಹದೇಶ 181, ಹನೂರು ಪಿಎಂಶ್ರೀ ಶಾಲೆಯ ಎಂ. ಶಿವಮಲ್ಲು 172 ಹಾಗೂ ಹುತ್ತೂರು ಶಾಲೆಯ ಸಿ. ಮಾದೇಶ 158 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಮಹಿಳಾ ಮೀಸಲು ವರ್ಗದಿಂದ ಎಲ್ಲೇಮಾಳ ಸರ್ಕಾರಿ ಶಾಲೆಯ ಬಿ. ಶಿವಕುಮಾರಿ 183 ಮತ ಹಾಗೂ ರಾಮಾಪುರ ಶಾಲೆಯ ವಿ. ರೂಪಶ್ರೀ ಅವರು 165 ಮತಗಳನ್ನು ಪಡೆಯುವುದರ ಮೂಲಕ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿದ್ದಾರೆ.