ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ದುರಸ್ತಿ ಹಾಗೂ ಮರು ನಿರ್ಮಾಣ ಕಾಮಗಾರಿಗೆ ಗಣೇಶ್ ಪ್ರಸಾದ್ ಭೂಮಿಪೂಜೆ ನೆರವೇರಿಸಿದರು. ರವಿಕುಮಾರ್, ಪಿ.ಮಹದೇವಪ್ಪ, ಎಚ್.ಎನ್.ಬಸವರಾಜು, ನಾರಾಯಣನಾಯ್ಕ, ಮಹದೇವನಾಯ್ಕ, ಸ್ವಾಮಿ, ಜಲೇಂದ್ರ, ಟಿ.ಪಿ.ನಾಗರಾಜು, ಚಿನ್ನಸ್ವಾಮಪ್ಪ, ಮನು, ಆನಂದನಾಯ್ಕ, ಸದಾಶಿವಪ್ಪ, ಚಂದ್ರಶೇಖರ್ ಇದ್ದರು.
- ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿಕೆ
ಗುಂಡ್ಲುಪೇಟೆ: ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ತಾಲೂಕಿನ ರಸ್ತೆಗಳನ್ನು ಉತ್ತಮವಾಗಿ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಶುಕ್ರವಾರ ಗುಂಡ್ಲುಪೇಟೆ-ಯಳಂದೂರು ರಾಜ್ಯ ಹೆದ್ದಾರಿ ದುರಸ್ತಿ ಹಾಗೂ ಮರುನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಹದಗೆಟ್ಟ ರಸ್ತೆಗಳು ಹಾಗೂ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಏ.21ರಂದು ತಾಲೂಕಿಗೆ ಆಗಮಿಸುವ ಮುಖ್ಯಮಂತ್ರಿಗಳ ಜತೆಗೆ ಲೋಕೋಪಯೋಗಿ ಸಚಿವರೂ ಆಗಮಿಸುತ್ತಿರುವುದರಿಂದ ಇಲಾಖೆ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಮತ್ತಷ್ಟು ಅನುದಾನ ತಂದು ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮೊದಲು ತಾಲೂಕಿನ ಸಂಗೇಗೌಡನಹುಂಡಿ ಗ್ರಾಮದಿಂದ ಪಡಗೂರುವರೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 2.4 ಕಿ.ಮೀ. ವರೆಗಿನ ರಸ್ತೆ ನಿರ್ಮಾಣ ಕಾಮಗಾರಿ, 2.5 ಕೋಟಿ ರೂ. ಅನುದಾನದಲ್ಲಿ ಕಮರಹಳ್ಳಿಯಿಂದ ಕೌಲಂದೆ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯ ಎಇಇ ರವಿಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಮಹದೇವಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ತೆರಕಣಾಂಬಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣನಾಯ್ಕ, ಮಹದೇವನಾಯ್ಕ, ಮಾಜಿ ಸದಸ್ಯರಾದ ಸ್ವಾಮಿ, ಜಲೇಂದ್ರ, ಮುಖಂಡರಾದ ಟಿ.ಪಿ.ನಾಗರಾಜು, ಚಿನ್ನಸ್ವಾಮಪ್ಪ, ಮನು, ಆನಂದನಾಯ್ಕ, ಸದಾಶಿವಪ್ಪ, ಚಂದ್ರಶೇಖರ ಸೇರಿದಂತೆ ಹಲವರು ಇದ್ದರು.