ಹನೂರು ತಾಲೂಕಿನ ಮೋಡಹಳ್ಳಿ ಗ್ರಾಮದ ಜಮೀನೊಂದರ ತೆಂಗಿನ ಮರದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು.
- 30 ಬಾಳೆಗಿಡಗಳಿಗೂ ಬೆಂಕಿಯಿಂದ ಹಾನಿ
ಹನೂರು: ಸಮೀಪದ ಕಾಮಗೆರೆ ಬಳಿಯ ಮೋಡಹಳ್ಳಿ ಗ್ರಾಮದ ಜಮೀನೊಂದರಲ್ಲಿ ಶುಕ್ರವಾರ ಬೆಂಕಿ ತಗುಲಿ ಅಡಿಕೆ ಹಾಗೂ ತೆಂಗಿನ ಮರಗಳು ಹಾನಿಯಾಗಿವೆ.
ಗ್ರಾಮದ ಹೇಮಲತಾ ಎಂಬುವರಿಗೆ ಸೇರಿದ ಜಮೀನಿನಲ್ಲಿ ಮಧ್ಯಾಹ್ನ ತೆಂಗು ಹಾಗೂ ಅಡಿಕೆ ಮರಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಲಾಯಿತು. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 4 ತೆಂಗಿನ ಮರ ಹಾಗೂ 40 ಅಡಿಕೆ ಮರದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ನಂದಿಸಿದರು. ಜಮೀನಿನಲ್ಲಿದ್ದ 30 ಬಾಳೆಗಿಡಗಳಿಗೂ ಬೆಂಕಿಯಿಂದ ಹಾನಿಯಾಗಿದೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಸಿಬ್ಬಂದಿ ಲಿಂಗೇಶ್, ಮನೋಹರ್ ಹಾಗೂ ಚಂದ್ರೇಗೌಡ ಇದ್ದರು.