ಕೊಳ್ಳೇಗಾಲ ಪಟ್ಟಣದ ಎಲ್‌ಐಸಿ ಕಚೇರಿಯಲ್ಲಿ ಆಯೋಜಿಸಿದ್ದ 70ನೇ ವಾರ್ಷಿಕೋತ್ಸ ಸಮಾರಂಭದಲ್ಲಿ ಭಾರತಿ, ಜಿ.ಎನ್.ಮಹದೇವ ಸ್ಬಾಮಿ, ವೆಂಕಟೇಶ್, ಬಿ.ಮಹೇಶ್, ಬಾಲ ಮುರಳಿ, ಮಂಜುನಾಥ್ ಹೆಗಡೆ ಇದ್ದರು.
ಕೊಳ್ಳೇಗಾಲ: ಪಟ್ಟಣದ ಎಲ್‌ಐಸಿ ಕಚೇರಿಯಲ್ಲಿ ಮಂಗಳವಾರ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) 70ನೇ ವರ್ಷದ ವಾರ್ಷಿಕೋತ್ಸ ವವನ್ನು ಆಚರಿಸಲಾಯಿತು.
ವ್ಯವಸ್ಥಾಪಕ ಜಿ.ಎನ್.ಮಹದೇವಸ್ವಾಮಿ ಮಾತನಾಡಿ, ಎಲ್‌ಐಸಿ 70 ವರ್ಷಗಳಿಂದ ದೇಶದ ಕೋಟ್ಯಂತರ ಜನರಿಗೆ ಆರ್ಥಿಕ ಭದ್ರತೆ ಹಾಗೂ ಭರವಸೆಯ ಸೇವೆಯನ್ನು ನೀಡುತ್ತಾ ಬಂದಿದೆ. ಪಾಲಿಸಿದಾರರ ವಿಶ್ವಾಸವೇ ಸಂಸ್ಥೆಯ ಶಕ್ತಿ. ಮುಂದಿನ ದಿನಗಳಲ್ಲೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಮತ್ತಷ್ಟು ವಿಶ್ವಾಸಾರ್ಹತೆ ಬಲಪಡಿಸಲಾಗುವುದು ಎಂದು ಹೇಳಿದರು.
ಪಾಲಿಸಿದಾರರಾದ ಭಾರತೀ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಹಿರಿಯ ಸಹೋದ್ಯೋಗಿ ಅಶ್ವಿನಿ ಹಾಗೂ ನಿವೃತ್ತ ಸಿಬ್ಬಂದಿ ಕೆ.ಮಹದೇವ ಮತ್ತು ವೀರಭದ್ರಯ್ಯ ಅವರನ್ನು ಸನ್ಮಾನಿಸಲಾಯಿತು.
ಸಹಾಯಕ ವ್ಯವಸ್ಥಾಪಕ ವೆಂಕಟೇಶ್, ಹಿರಿಯ ಅಭಿವೃದ್ಧಿ ಅಧಿಕಾರಿಗಳಾದ ಬಿ.ಮಹೇಶ್, ಬಾಲಮುರಳಿ, ಮಂಜುನಾಥ್ ಹೆಗಡೆ, ವಿಮಾ ಪ್ರತಿನಿಧಿಗಳಾದ ಸತೀಶ್, ಗುರುಪ್ರಸಾದ್, ಸೋಮಣ್ಣ, ಜಗದೀಶ್, ನಾಗರಾಜು, ಬಸವರಾಜು, ಕನಕ ರಾಜು, ಸಿಬ್ಬಂದಿ ಉಪಸ್ಥಿತರಿದ್ದರು.