ಚಾಮರಾಜನಗರದ ನಿವಾಸದಲ್ಲಿ ಚಿತ್ರನಟ ಚಂದ್ರಣ್ಣ ಅವರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು. ಸುರೇಶ್ ಋಗ್ವೇದಿ, ರವಿಚಂದ್ರಪ್ರಸಾದ್, ಮಾಂಬಳ್ಳಿ ಅರುಣ್‌ಕುಮಾರ್, ಎಸ್.ಲಕ್ಷ್ಮೀನರಸಿಂಹ, ಎಲ್.ಸುರೇಶ್ ಇತರರು ಹಾಜರಿದ್ದರು. 
ಚಾಮರಾಜನಗರ

ಚಿತ್ರನಟ ಚಂದ್ರಣ್ಣಗೆ ಕಸಾಪದಿಂದ ಸನ್ಮಾನ

ಪ್ರಮುಖ ಮುಖ್ಯಾಂಶಗಳು

  • ಸರಳರು, ಸಜ್ಜನರು ಆದ ಚಂದ್ರು ಡಾ.ರಾಜಕುಮಾರ್ ಅವರ ಒಡನಾಡಿ
  • ರಾಜಕುಮಾರ ಅವರ ಸ್ನೇಹದಿಂದ ಹಲವಾರು ಚಿತ್ರಗಳಲ್ಲಿ ನಟಿಸಿ ಜನ ಮೆಚ್ಚುಗೆ
ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಚಿತ್ರನಟ ಚಂದ್ರಣ್ಣ ಅವರನ್ನು ಗುರುವಾರ ಸನ್ಮಾನಿಸಲಾಯಿತು.
ಇದೇ ವೇಳೆ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್ ಋಗ್ವೇದಿ ಮಾತನಾಡಿ, ಸರಳರು, ಸಜ್ಜನರು ಆದ ಚಂದ್ರು ಡಾ.ರಾಜಕುಮಾರ್ ಅವರ ಒಡನಾಡಿ. ರಾಜಕುಮಾರ ಅವರ ಸ್ನೇಹದಿಂದ ಹಲವಾರು ಚಿತ್ರಗಳಲ್ಲಿ ನಟಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ ಎಂದರು. ಪರಿಷತ್ತಿನ ನಿರ್ದೇಶಕ ರವಿಚಂದ್ರಪ್ರಸಾದ್ ಮಾತನಾಡಿ, ಚಂದ್ರಣ್ಣ ಇಳಿ ವಯಸ್ಸಿನಲ್ಲಿ ನಮ್ಮೊಂದಿಗೆ ಇರುವುದು ಪುಣ್ಯವೆಂದು ತಿಳಿಸಿದರು. ರಂಗ ಕಲಾವಿದ ಮಾಂಬಳ್ಳಿ ಅರುಣ್‌ಕುಮಾರ್, ಬರಹಗಾರ ಎಸ್.ಲಕ್ಷ್ಮೀನರಸಿಂಹ, ಸಮಾಜ ಸೇವಕ ಎಲ್.ಸುರೇಶ್ ಇದ್ದರು.