ಕೊಳ್ಳೇಗಾಲದ ಮುಡಿಗುಂಡ ಬಡಾವಣೆಯ ಈಶ್ವರನ ಗುಡಿ ಬೀದಿಯಲ್ಲಿ ಕುಡಿಯುವ ನೀರಿನ ನಲ್ಲಿಗಳ ಮೀಟರ್ ಕಳವು ಮಾಡಿರುವುದು.
ಕೊಳ್ಳೇಗಾಲ:
ಪಟ್ಟಣದ ಮುಡಿಗುಂಡ ಬಡಾವಣೆ ಈಶ್ವರನ ಗುಡಿ ಬೀದಿಯಲ್ಲಿ ಶನಿವಾರ ರಾತ್ರಿ ನಿರಂತರ ಕುಡಿಯುವ ನೀರಿನ ನಲ್ಲಿಗಳ ಮೀಟರ್‌ಗಳನ್ನು ಕಳವು ಮಾಡಲಾಗಿದೆ.
ಈಶ್ವರನ ಗುಡಿ ಬೀದಿಯಲ್ಲಿರುವ ಸುರೇಶ್, ಅನ್ನಪೂರ್ಣ, ಪೋಸ್ಟ್ ಆಫೀಸ್ ಪಕ್ಕದ ಮನೆ ಸೇರಿದಂತೆ ಇನ್ನಿತರ ಮನೆಗಳ ಮುಂಭಾಗವಿದ್ದ ನಲ್ಲಿಗಳ ಮೀಟರ್‌ಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಬಡಾವಣೆಯ ಮುಡಿಗುಂಡ ಬೀಟ್ ಪೊಲೀಸ್ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಮಾಹಿತಿ ಹಂಚಿಕೊಂಡರು. ನಂತರ 112 ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.