ನಾಗಣ್ಣ 
ಚಾಮರಾಜನಗರ

ವೀರನಪುರದಲ್ಲಿ ರೈತ ಆತ್ಮಹತ್ಯೆ

ಗುಂಡ್ಲುಪೇಟೆ: ತಾಲೂಕಿನ ವೀರನಪುರ ಗ್ರಾಮದಲ್ಲಿ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದ ರೈತ ನಾಗಣ್ಣ(45) ಆತ್ಮಹತ್ಯೆ ಮಾಡಿಕೊಂಡವರು. ನಾಗಣ್ಣ ಕೂಲಿ ಹಾಗೂ ಕೃಷಿ ಮಾಡಿಕೊಂಡಿದ್ದರು. ಮಹದೇವಪ್ಪ ಅವರ ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದ ಕೇರಳ ಮೂಲದ ಮನ್ಸೂರ್ ಅವರ ಜತೆ ಸೇರಿ ಮೂರು ಲಕ್ಷ ರೂ. ಬಂಡವಾಳ ಹಾಕಿ ಆಲೂಗಡ್ಡೆ, ಈರುಳ್ಳಿ, ಕೋಸು ಮುಂತಾದ ಬೆಳೆಗಳನ್ನು ಬೆಳೆದಿದ್ದರು. ಆದರೆ ಫಸಲನ್ನು ಮಾರಾಟ ಮಾಡಿದ ನಂತರವೂ ಮನ್ಸೂರ್ ಹಣ ಕೊಡದ ಬಗ್ಗೆ ಡಿ.30ರಂದು ಇಬ್ಬರಿಗೂ ಮಾತಿಗೆ ಮಾತು ಬೆಳೆದು ಜಗಳ ನಡೆದಿತ್ತು.
ಈ ಬಗ್ಗೆ ಮನ್ಸೂರ್ ಅವರನ್ನು ಕೇಳುತ್ತಿದ್ದಾಗ ಗ್ರಾಮದ ಪ್ರಸನ್ನ ಅವರೂ ಮನ್ಸೂರ್ ಜತೆಗೂಡಿ ಅವಾಚ್ಯ ಶಬ್ದಗಳಿಂದ ಬೈದು ನನ್ನ ಹಾಗೂ ಗಂಡನ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಮನನೊಂದ ನನ್ನ ಗಂಡ ಗುರುವಾರ ರಾತ್ರಿ ಚಂದ್ರಶೇಖರ್ ಅವರ ಜಮೀನಿನಲ್ಲಿರುವ ಹುಣಿಸೆ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ ಎಂದು ಮೃತರ ಪತ್ನಿ ಸುಮಾ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.