ರೈತನ ಮೇಲೆ ನಾಯಿಗಳ ಗುಂಪು ದಾಳಿ  
ಚಾಮರಾಜನಗರ

ರೈತನ ಮೇಲೆ ನಾಯಿಗಳ ಗುಂಪು ದಾಳಿ

ಕೊಳ್ಳೇಗಾಲ: ಪಟ್ಟಣದ ಬೆಂಡರಹಳ್ಳಿ ಬಡಾವಣೆಯಲ್ಲಿ ಶುಕ್ರವಾರ ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ನಾಯಿಗಳ ಗುಂಪು ದಾಳಿ ಮಾಡಿ ಕಚ್ಚಿದ ಪರಿಣಾಮ ಗಾಯಗೊಂಡಿದ್ದಾರೆ.
ಪಟ್ಟಣದ ನಿವಾಸಿ ಬಾಬು ಪಾಷ ನಾಯಿ ದಾಳಿಗೆ ಒಳಗಾದವರು. ಬೆಂಡರಹಳ್ಳಿ ಗ್ರಾಮದಲ್ಲಿರುವ ತಮ್ಮ ಜಮೀನಿಗೆ ತೆರಳುವಾಗ ಮೂರ್ನಾಲ್ಕು ನಾಯಿಗಳ ಗುಂಪು ಬಾಬು ಪಾಷಾ ಅವರ ಮೇಲೆ ದಾಳಿ ನಡೆಸಿದ್ದು. ಈ ವೇಳೆ ನಾಯಿಯೊಂದು ಅವರ ಎಡ ಕಾಲಿಗೆ ಕಚ್ಚಿದೆ. ಗಾಯಾಳುವನ್ನು ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.