ಕೊಳ್ಳೇಗಾಲ ಮಹದೇಶ್ವರ ಕಾಲೇಜ್ ರಸ್ತೆಯಲ್ಲಿರುವ ಗರ್ಲ್ಸ್ ಹೋಂ ಆವರಣದಲ್ಲಿ ನಿಲ್ಲಿಸಿದ್ದ ಕ್ವಾಲಿಸ್ ಕಾರಿನ ಕಿಟಕಿ ಗಾಜಿನ ರಬ್ಬರ್ ಕಿತ್ತು ಹಾಕಿ ಕಾರನ್ನು ಕಳ್ಳರು ಕದಿಯಲು ಯತ್ನಿಸಿರುವ ಸ್ಥಳಕ್ಕೆ ಪಿಎಸ್‌ಐ ಉಮಾವತಿ ಮತ್ತು ಕಾನ್‌ಸ್ಟೆಬಲ್ ಸವಿರಾಜ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿರುವುದು.
ಕೊಳ್ಳೇಗಾಲ: ಪಟ್ಟಣದ ಮಹದೇಶ್ವರ ಕಾಲೇಜು ರಸ್ತೆಯಲ್ಲಿರುವ ಗರ್ಲ್ಸ್ ಹೋಂ ಆವರಣದಲ್ಲಿ ನಿಲ್ಲಿಸಿದ್ದ ಕಾರಿನ ಕಿಟಕಿ ಗಾಜಿನ ರಬ್ಬರ್ ಕಿತ್ತುಹಾಕಿ ಅಪರಿಚಿತರು ಕಾರನ್ನು ಕದಿಯಲು ಯತ್ನಿಸಿರುವ ಸಂಬಂಧ ಪಟ್ಟಣ ಪೊಲೀಸ್ ಠಾಣೆಗೆ ಗರ್ಲ್ಸ್ ಹೋಂ ಖಜಾಂಚಿ ಕರುಣಾಕರ್ ಶುಕ್ರವಾರ ದೂರು ನೀಡಿದ್ದಾರೆ.
ಶುಕ್ರವಾರ ಬೆಳಗಿನ ಜಾವಾ 2 ಗಂಟೆಗೆ ಅಪರಿಚಿತರು ಗರ್ಲ್ಸ್ ಹೋಂ ಬಳಿ ನಿಂತಿದ್ದ ಕ್ವಾಲಿಸ್ ಕಾರಿನ ಗಾಜಿನ ರಬ್ಬರ್ ಕಿತ್ತುಹಾಕಿ ಕಾರನ್ನು ಕದಿಯಲು ಯತ್ನಿಸಿದಾಗ ಶಬ್ದ ಕೇಳಿ ರೂಂನಲ್ಲಿದ್ದ ಸಿಸ್ಟರ್ ಒಬ್ಬರು ಲೈಟ್ ಹಾಕುತ್ತಿದ್ದಂತೆ ಕಳ್ಳ ಪರಾರಿಯಾಗಿದ್ದಾರೆ.
ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಗೆ ಸಂಸ್ಥೆಯ ಖಜಾಂಚಿ ಕರುಣಾಕರ್ ದೂರು ನೀಡಿದ್ದು, ಅಪರಾಧ ವಿಭಾಗದ ಪಿಎಸ್‌ಐ ಉಮಾವತಿ ಮತ್ತು ಕಾನ್‌ಸ್ಟೆಬಲ್ ಸವಿರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆಲ ತಿಂಗಳ ಹಿಂದಷ್ಟೆ ಕೆಲವು ಕಿಡಿಗೇಡಿಗಳು ಗರ್ಲ್ಸ್ ಹೋಂ ಗೋಡೆಯನ್ನು ಒಡೆದು ಹಾಕಿದ್ದರು. ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಅಲ್ಲದೆ, ಡಿ.31ರಂದು ಮಧ್ಯರಾತ್ರಿ ಅಪರಿಚಿತ ವ್ಯಕ್ತಿಯೊಬ್ಬನು ಕಬ್ಬಿಣದ ರಾಡಿನಿಂದ ಕೊಠಡಿಯ ಒಳಗೆ ಹಾಸಿಗೆ ಮೇಲೆ ಮಲಗಿದ್ದ ವಿದ್ಯಾರ್ಥಿನಿಗೆ ಚುಚ್ಚಿ ಪರಾರಿಯಾಗಿದ್ದನು. ಇದೀಗ ಮತ್ತೆ ಗರ್ಲ್ಸ್ ಹೋಂ ಆವರಣದಲ್ಲಿ ನಿಲ್ಲಿಸಿದ್ದ ಕ್ವಾಲಿಸ್ ಕಾರಿನ ಕಿಟಕಿ ಗ್ಲಾಸಿನ ರಬ್ಬರ್ ಅನ್ನು ತೆಗೆದು ಕಳವಿಗೆ ಯತ್ನಿಸಿದ್ದಾರೆ.