ರಾಮಾಪುರದ ಜೆಎಸ್‌ಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಸಮಾಜ ಸೇವಕ ಡಾ.ನಿಶಾಂತ್ ಉದ್ಘಾಟಿಸಿದರು. ಶ್ರೀ ಬಸವಣ್ಣ ಸ್ವಾಮೀಜಿ, ರಾಜಣ್ಣ, ಡಾ. ಪ್ರಕಾಶ್ ಇತರರಿದ್ದರು.  
ಚಾಮರಾಜನಗರ

ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಅನಾರೋಗ್ಯ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಸಮಾಜ ಸೇವಕ ನಿಶಾಂತ್ ಕಳವಳ
ಹನೂರು : ತಾಲೂಕಿನ ರಾಮಾಪುರ ಜೆಎಸ್‌ಎಸ್ ಕಾಲೇಜಿನಲ್ಲಿ ಭಾನುವಾರ ಮೈಸೂರು ಜಿಸಿಸ್ ಸ್ಪೋರ್ಟ್ ಮೆಡಿಸನ್ ಸೆಂಟರ್ ಮತ್ತು ಮಲ್ಟಿ ಸ್ಟೆಪಾಲಿಟಿ ಆಸ್ಪತ್ರೆ ವತಿಯಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಜನರಲ್ ಮೆಡಿಸನ್, ಜನರಲ್ ಸರ್ಜನ್, ಆರ್ಥೋಪೆಡಿಕ್, ಪ್ರಸೂತಿ, ಸ್ತ್ರೀರೋಗ ಸೇರಿದಂತೆ ಇತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ನಡೆಯಿತು. ರಾಮಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮದ ಸುಮಾರು 500ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ವೈದ್ಯರು ಅಗತ್ಯ ಚಿಕಿತ್ಸೆ ಹಾಗೂ ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ನಿಶಾಂತ್, ಈ ಭಾಗದಲ್ಲಿ ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಈ ಶಿಬಿರ ಜನರಿಗೆ ಅನುಕೂಲವಾಗಲಿದ್ದು, ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ಗೋಪಿಶೆಟ್ಟಿಯೂರು ಸುತ್ತೂರು ಶಾಖಾ ಮಠದ ಶ್ರೀ ಬಸವಣ್ಣ ಸ್ವಾಮೀಜಿ, ಮಹದೇಶ್ವರ ಹೋಂ ಅಪ್ಲೈಯನ್ಸ್ ಮಾಲೀಕ ರಾಜಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ಜಿಸಿಸ್ ಆಸ್ಪತ್ರೆ ವೈದ್ಯರಾದ ಡಾ.ಜಗದೀಶ್, ಡಾ.ಚಂದ್ರಿಕಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ನವೀನ್, ಪ್ರಾಂಶುಪಾಲ ರಾಜಶೇಖರ್, ಮುಖ್ಯ ಶಿಕ್ಷಕ ನಟರಾಜು ಇತರರು ಇದ್ದರು.