ಯಳಂದೂರು ತಾಲೂಕಿನ ದಾಸನಹುಂಡಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿ ಉಚಿತ ಕಣ್ಣಿನ ಪೊರೆ ತಪಾಸಣೆ ಶಿಬಿರದಲ್ಲಿ ಚಿಲುಕವಾಡಿ ಬೆಟ್ಟದ ಶಂಭುಲಿಂಗೇಶ್ವರ ಕ್ಷೇತ್ರದ ಶ್ರೀ ಬಾಲ ಷಡಕ್ಷರಿಸ್ವಾಮಿ ಮಾತನಾಡಿದರು. ಡಿ.ಸಿ.ಬಾಬು, ಡಾ.ಲೋಕೇಶ್ ಇತರರು ಇದ್ದರು.  
ಚಾಮರಾಜನಗರ

ಕಾಲಕಾಲಕ್ಕೆ ಕಣ್ಣಿನ ಪರೀಕ್ಷೆ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಬಾಲಷಡಕ್ಷರಿಸ್ವಾಮಿ ಅಭಿಪ್ರಾಯ
  • ದಾಸನಹುಂಡಿಯಲ್ಲಿ ನೇತ್ರ ತಪಾಸಣೆ
ಯಳಂದೂರು: ಕಣ್ಣುಗಳ ದೃಷ್ಟಿಯು ಸಮರ್ಪಕವಾಗಿದ್ದರೆ ಕುಳಿತ ಸ್ಥಳದಿಂದಲೇ ಜಗತ್ತನ್ನು ವೀಕ್ಷಿಸುವ ಶಕ್ತಿ ಪ್ರತಿಯೊಬ್ಬರಲ್ಲಿದೆ. ಆದ್ದರಿಂದ ಕಾಲಕಾಲಕ್ಕೆ ಕಣ್ಣಿನ ಪರೀಕ್ಷೆ ಅಗತ್ಯವಿದೆ ಎಂದು ಚಿಲುಕವಾಡಿ ಬೆಟ್ಟದ ಶಂಭುಲಿಂಗೇಶ್ವರ ಕ್ಷೇತ್ರದ ಶ್ರೀ ಬಾಲಷಡಕ್ಷರಿಸ್ವಾಮಿ ಅಭಿಪ್ರಾಯಪಟ್ಟರು.
ತಾಲೂಕಿನ ದಾಸನಹುಂಡಿ ಗ್ರಾಮದಲ್ಲಿ ಒಕ್ಕಲಿಗರ ಸಮುದಾಯ ಭವನದಲ್ಲಿ ಗುರುವಾರ ಶ್ರೀ ನಿಜಗುಣ ಫೌಂಡೇಷನ್, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆಯ ಎಂಆರ್‌ಸಿ ಕಣ್ಣಿನ ಆಸ್ಪತ್ರೆ ಹಾಗೂ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ ಜಿಲ್ಲಾ ಮಟ್ಟದ ಬೃಹತ್ ಕಣ್ಣಿನ ಉಚಿತ ಪೊರೆ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾಡಂಚಿನ ಗ್ರಾಮೀಣ ಪ್ರದೇಶದಲ್ಲಿ ಈ ರೀತಿಯ ಕಣ್ಣಿನ ತಪಾಸಣೆ ಶಿಬಿರವು ನಡೆಯುತ್ತಿರುವುದು ಬಹಳಷ್ಟು ಬಡ ವರ್ಗದ ಜನರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಹೈನುಗಾರಿಕೆ, ಜೇನು, ಕುರಿ ಸಾಕಣೆ, ಸಾವಯವ ಗೊಬ್ಬರ ತಯಾರಿಕೆ ಸೇರಿದಂತೆ ಇತರ ರೈತರ ಉಪಯುಕ್ತವಾಗುವ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ರೈತರಿಗೆ ನೆರವಾಗಬೇಕಾಗಿದೆ ಎಂದು ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ದಾಸನಹುಂಡಿ ಡಿ.ಸಿ.ಬಾಬು ಮಾತನಾಡಿ, ಪ್ರಸುತ್ತ ದಿನದಲ್ಲಿ ಕಣ್ಣಿನ ಸುರಕ್ಷತೆಯ ಬಗ್ಗೆ ಗಮನಹರಿಸಬೇಕು. ಪ್ರಸುತ್ತ ಯುವ ಸಮುದಾಯವು ಮೊಬೈಲ್, ಟಿವಿ, ಕಂಪ್ಯೂಟರ್ ಹೆಚ್ಚಾಗಿ ವೀಕ್ಷಣೆ ಮಾಡುವುದರಿಂದ ದೃಷ್ಟಿ ದೋಷ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ 90ಕ್ಕೂ ಹೆಚ್ಚು ಜನರಿಗೆ ಕಣ್ಣಿನ ತಪಾಸಣೆ ನಡೆಸಿದರು. ಅದರಲ್ಲಿ 25ಕ್ಕೂ ಹೆಚ್ಚು ಜನರು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ದಾಖಲಾದರು. ಒಕ್ಕಲಿಗರ ವಿಕಾಸ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ಎಚ್.ಎಲ್.ಯಮುನಾ, ಮೈಸೂರಿನ ಆರೋಗ್ಯ ರಕ್ಷಾ ಸಮಿತಿ ನಿರ್ದೇಶಕ ಡಾ.ಲೋಕೇಶ್, ಡಾ ನಾಗಾರ್ಜುನ, ಚಿನ್ನಸ್ವಾಮಿ, ಎಂ.ಸಿ.ರಾಮು, ಗಿರೀಶ್‌ಗೌಡ್, ಮಹದೇವಗೌಡ್, ಶೇಷಪ್ಪ, ಡಿ.ಸಿ.ಕುಮಾರ್, ರಂಗಸ್ವಾಮಿ, ಲಿಂಗಣ್ಣ, ಸೇರಿದಂತೆ ಇತರರು ಇದ್ದರು.