ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಚೈತ್ರ ಉದ್ಘಾಟಿಸಿದರು. ಶಿವಕುಮಾರ್, ಮಹದೇವಸ್ವಾಮಿ, ಶಂಕರನಾರಾಯಣ ಜೋಯಿಸ್, ಬಸವರಾಜಪ್ಪ, ವಿಜಯಕಾಂತ್, ರಮೇಶ್ ಇದ್ದರು. 
ಚಾಮರಾಜನಗರ

ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಎ. ಆರ್. ರಘುರಾಮ
ಗುಂಡ್ಲುಪೇಟೆ : ಕಣ್ಣು ಪ್ರತಿಯೊಬ್ಬರಿಗೂ ಪ್ರಮುಖವಾದ ಅಂಗವಾಗಿದ್ದು, ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೊಜನೆಯ ಮೇಲ್ವಿಚಾರಕಿ ಚೈತ್ರಾ ಹೇಳಿದರು.
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಹಾಗೂ ಅರವಿಂದ ಕಣ್ಣಾಸ್ಪತ್ರೆಯ ಸಹಯೋಗದೊಂದಿಗೆ
ಪಟ್ಣಣದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯ ಇಲಾಖೆಯ ಬಫರ್ ವಲಯದ ಪ್ರಭಾರ ಆರ್ ಎಫ್ ಒ ಶಿವಕುಮಾರ್ ಮಾತಮಾಡಿ, ಪಟ್ಟಣ ಹಾಗೂ
ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಜನರು ತಮ್ಮ ಕಣ್ಣಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ಚಿಕಿತ್ಸೆ ಮಾಡಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಖರ್ಚು ಮಾಡುವಂತಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರು ಇಂಥಾ ಶಿಬಿರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ತಮ್ಮ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತದ ಎಂದು ಹೇಳಿದರು. ಅರವಿಂದ ಆಸ್ಪತ್ರೆಯ ತಜ್ಞರಾದ ಡಾ. ರಘುರಾಂ, ಡಾ. ಲಿಯೋಸೋನಿ, ಡಾ. ಅಮರ್ ಸಿದ್ದಿಕ್, ಡಾ. ಧರ್ಮೇಂದ್ರ ಕುಮಾರ್ ತಂಡವು 135 ಹೊರರೋಗಿಗಳನ್ನು ತಪಾಸಣೊಳಪಡಿಸಿಯ್ದರು.