ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್. ಎಂ. ಗಣೇಶ್ ಪ್ರಸಾದ್ ಭೂಮಿಪೂಜೆ ನೆರವೇರಿಸಿದರು. ಎಚ್.ಎಸ್.ನಂಜುಂಡಪ್ರಸಾದ್, ರಾಜಶೇಖರ. ಮಹದೇವಪ್ಪ ಬಸವರಾಜಪ್ಪ. ರಂಗಸ್ವಾಮಿ. ಮಾಣಿಕ್ಯ. ಮಹದೇವಪ್ಪ. ಚನ್ನಪ್ಪ. ನಾಗಪ್ಪ. ಮಹೇಶ್ ಇದ್ದರು.
- ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿಕೆ
- ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
ಗುಂಡ್ಲುಪೇಟೆ: ಸರ್ಕಾರ ನೀಡಿದ ಎಲ್ಲ ಅನುದಾನಗಳನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದ್ದು ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನಿರೀಕ್ಷಿಸಲಾಗುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ತಾಲೂಕಿನ ಮಾಡ್ರಹಳ್ಳಿ ಗ್ರಾಮದಲ್ಲಿ ಸೋಮವಾರ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತೆ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮಾಡ್ರಹಳ್ಳಿ ಗ್ರಾಮಕ್ಕೆ ನಲವತ್ತು ಲಕ್ಷ ರೂ., ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಕಳೆದ ಬಾರಿ ಗ್ರಾಮದಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣವಾಗಿದ್ದರಿಂದ ಹಲವಾರು ಸಮಸ್ಯೆ ಎದುರಾಗಿದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಹಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಮುಖ್ಯಮಂತ್ರಿಗಳು ತಾಲೂಕಿನ ಅಭಿವೃದ್ಧಿಗೆ ಮಜೂರು ಮಾಡಿರುವ 25-26ನೇ ಸಾಲಿನ 50 ಕೋಟಿ ರೂ., ವಿಶೇಷ ಅನುದಾನವನ್ನು ಮೂಲಸೌಕರ್ಯಗಳ ಕೊರತೆಯಿರುವ ಗ್ರಾಮಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ. ಅಲ್ಲದೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೋರಿದ್ದು ಶುಕ್ರವಾರ (6) ರಿಂದ ಆರಂಭವಾಗುವ ಬಜೆಟ್‌ನಲ್ಲಿ ಅನುದಾನ ಮಂಜೂರಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಮುಖಂಡ ರಾಜಶೇಖರ. ರೈತ ಮುಖಂಡರಾದ ಮಹದೇವಪ್ಪ ಬಸವರಾಜಪ್ಪ. ರಂಗಸ್ವಾಮಿ. ಮಾಣಿಕ್ಯ. ಮಹದೇವಪ್ಪ. ಚನ್ನಪ್ಪ. ನಾಗಪ್ಪ. ಮಹೇಶ್ ಸೇರಿದಂತೆ ಹಲವರು ಇದ್ದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಬೆರಟಹಳ್ಳಿ ಗ್ರಾಮದಲ್ಲಿ 45 ಲಕ್ಷ ರೂ., ತೆರಕಣಾಂಬಿ ಗ್ರಾಮದಲ್ಲಿ 25 ಲಕ್ಷ ರೂ., ಗುರುವಿನಪುರ ಗ್ರಾಮದಲ್ಲಿ 40 ಲಕ್ಷ ರೂ., ಹುತ್ತೂರು ಗ್ರಾಮದಲ್ಲಿ 30 ಲಕ್ಷ ರೂ., ಚಿರಕನಹಳ್ಳಿ ಗ್ರಾಮದಲ್ಲಿ 50 ಲಕ್ಷ ರೂ., ವೆಚ್ಚದಲ್ಲಿ ಸಾಮಾನ್ಯ ವರ್ಗದ ಬೀದಿಗಳಿಗೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.