ಕೊಳ್ಳೇಗಾಲ ಪಟ್ಟಣದ ಭೀಮನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಎನ್.ಮಹೇಶ್, ಡಾ.ಲೋಕೇಶ್ವರಿ, ವರದರಾಜು, ಎಸ್. ಆನಂದಮೂರ್ತಿ, ಚಿಕ್ಕಮಾಳಿಗೆ ಇತರರು ಇದ್ದಾರೆ.
- ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲೋಕೇಶ್ವರಿ ಸಲಹೆ
- ರಕ್ತದಾನ ಶಿಬಿರ
ಕೊಳ್ಳೇಗಾಲ: ಪಟ್ಟಣದ ಭೀಮ ನಗರದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವದ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣಾ ಸಮಿತಿ, ಭೀಮನಗರ ಯಜಮಾನರು, ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘ, ಭೀಮನಗರದ ವೈದ್ಯರ ಬಳಗದ ವತಿಯಿಂದ ಏರ್ಪಡಿಸಿದ್ದ ಶಿಬಿರಕ್ಕೆ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲೋಕೇಶ್ವರಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಅಂಬೇಡ್ಕರ್ ರಚಿಸಿದ ಸಂವಿಧಾನ ಪ್ರತಿಯೊಬ್ಬರಿಗೂ ಹಕ್ಕು, ಸೌಲಭ್ಯಗಳನ್ನು ನೀಡಿದೆ. ಮುಂದಿನ ಪೀಳಿಗೆ ಸಂವಿಧಾನ ಓದಬೇಕು. ಅದರ ಮಹತ್ವವನ್ನು ತಿಳಿಯಬೇಕು ಎಂದರು.
ರಕ್ತದಾನ ಶಿಬಿರಗಳು ಹೆಚ್ಚಿನ ರೀತಿಯಲ್ಲಿ ನಡೆಯಬೇಕು. ತುರ್ತು ಪರಿಸ್ಥಿತಿಯಲ್ಲಿರುವ ಜನರ ಜೀವ ಉಳಿಯುತ್ತದೆ. ಆರೋಗ್ಯವಂತ ಸಮಾಜಕ್ಕೆ ರಕ್ತದಾನ ಅತ್ಯಗತ್ಯವಾಗಿದೆ ಎಂದರು.
ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಭೀಮನಗರದ ಯಜಮಾನರು ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ಸಂಘದ ಪದಾಧಿಕಾರಿಗಳು ರಕ್ತದಾನ ಶಿಬಿರ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹೀಗೆ ಅಂಬೇಡ್ಕರ್ ಜಯಂತಿಯನ್ನು ಸಮಾಜಮುಖಿ ಕಾರ್ಯ ನಡೆಸುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಇಂದಿನ ಶಿಬಿರದಲ್ಲಿ ಒಟ್ಟು 33 ಜನರು ರಕ್ತದಾನ ಮಾಡಿದರು.
ಪೊಲೀಸ್ ವೃತ್ತ ನಿರೀಕ್ಷಕ ಶಿವಮಾದಯ್ಯ, ಭೀಮನಗರದ ವೈದ್ಯರ ಬಳಗದ ಡಾ.ಎಚ್.ಶ್ರೀಧರ್, ಡಾ.ಪ್ರಿಯದರ್ಶಿನಿ, ಡಾ.ಸಾಹೀಲ್ ಅಹಮದ್, ಡಾ.ವನ್ಸಿಕಾ, ಚಾಮರಾಜನಗರ ಬ್ಲಡ್ ಬ್ಯಾಂಕ್ ಹಿರಿಯ ಪ್ರಯೋಗಶಾಲಾ ತಂತ್ರಜ್ಞ್ಞಾನ ಸತ್ಯ, ಡಿಎಸ್‌ಎಸ್ ಮುಖಂಡ ದೊಡ್ಡಿಂದುವಾಡಿ ಸಿದ್ದರಾಜು, ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಎಸ್.ಆನಂದಮೂರ್ತಿ, ಉಪಾಧ್ಯಕ್ಷ ಕಿರಣ್, ಸಹ ಕಾರ್ಯದರ್ಶಿ ಶಶಿಧರ್, ಭೀಮನಗರದ ಯಜ ಮಾನರಾದ ಚಿಕ್ಕಮಾಳಿಗೆ, ವರದರಾಜು, ಎಸ್.ಪ್ರಭುಸ್ವಾಮಿ, ಎಂ.ಎಸ್.ಸುರೇಶ್, ಜಿ.ಸಿದ್ದರಾಜು, ನಿಂಗರಾಜು, ಸಾವುಕಯ್ಯ, ಎಸ್.ಸಿದ್ದರಾಜು, ಕೆ.ಕೆ.ಮೂರ್ತಿ, ನಗರಸಭೆ ಮಾಜಿ ಸದಸ್ಯ ಮಂಜುನಾಥ್, ಚಂದು, ನಾಮ ನಿರ್ದೇಶಿತ ಸದಸ್ಯ ಆನಂದ್, ಮುಖಂಡರಾದ ರಾಜಶೇಖರ ಮೂರ್ತಿ, ರಾಚಪ್ಪಾಜಿ, ದಿಲೀಪ್, ಸಿದ್ದಪ್ಪಾಜಿ, ಸನತಕುಮಾರ್, ಸಿದ್ದಾರ್ಥ್, ಗುರುಮೂರ್ತಿ, ಶಂಕರ್ ಚೇತನ್, ವಕೀಲ ಬಸವರಾಜು, ಬೆಂಜಿಮಿನ್, ಡಾ.ಅಂಬೇಡ್ಕರ್ ಆಟೋ ಚಾಲಕರ ಸಂಘದ ಹರೀಶ್ ಇತರರಿದ್ದರು.