ಕೊಳ್ಳೇಗಾಲ ಪಟ್ಟಣದ ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ದೃಷ್ಟಿ ಸಮಸ್ಯೆ ಯಿಂದ ಬಳಲುತ್ತಿದ್ದವರನು ವ್ಯೆದ್ಯರು ತಪಾಸಣೆ ಮಾಡಿದರು. ಎಚ್.ಕೆ ಮಹಾನಂದ್, ರವೀಂದ್ರ, ನಾಗರಾಜು ಇತರರು ಇದ್ದರು.
- ಬೆಂಗಳೂರು ಸಿಸಿಬಿ ವಿಭಾಗದ ಎಸಿಪಿ ಎಚ್.ಕೆ.ಮಹಾನಂದ ಹೇಳಿಕೆ
- ಕಣ್ಣಿನ ಉಚಿತ ತಪಾಸಣಾ ಶಿಬಿರ
ಕೊಳ್ಳೇಗಾಲ: ಪಟ್ಟಣದ ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಎಚ್.ಕೃಷ್ಣಸ್ವಾಮಿ ಮೆಮೋ ರಿಯಲ್ ಚಾರಿಟೇಬಲ್ ಟ್ರಸ್ಟ್, ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆಗಳು ಕೊಳ್ಳೇಗಾಲ, ರೋಟರಿ ಮಿಡ್- ಟೌನ್ ಹಾಗೂ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನೇತ್ರ ನಿರಂತರ ಶೀರ್ಷಿಕೆಯಡಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಬೆಂಗಳೂರು ಸಿಸಿಬಿ ವಿಭಾಗದ ಎಸಿಪಿ ಎಚ್.ಕೆ.ಮಹಾನಂದ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಪ್ರತಿಯೊಬ್ಬರು ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ ಎಂದು ಹೇಳಿದರು.
ಸತತ 46 ತಿಂಗಳಿಂದ ಆಯೋಜನೆ ಮಾಡಿರುವ ಕಣ್ಣಿನ ಉಚಿತ ತಪಾಸಣಾ ಶಿಬಿರ ಇಲ್ಲಿಯವರೆವಿಗೆ 5130 ಜನರು ತಪಾಸಣೆಗೆ ಒಳಪಟ್ಟಿದ್ದಾರೆ. ಅದರಲ್ಲಿ 3113 ಜನರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಹಾಗೆಯೇ ಪ್ರತಿ ತಿಂಗಳು ಎರಡನೇ ಭಾನುವಾರ ನಡೆಯುವ ಉಚಿತ ನೇತ್ರ ನಿರಂತರ ಕಾರ್ಯಕ್ರಮದ ಸದುಪಯೋಗವನ್ನು ಪಡೆದು ಕೊಳ್ಳಬೇಕೆಂದು ಮನವಿ ಮಾಡಿದರು.
ಶಿಬಿರದಲ್ಲಿ 135 ಜನರು ತಪಾಸಣೆಗೆ ಒಳಪಟ್ಟಿದ್ದು ಇವರಲ್ಲಿ 89 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಅರವಿಂದ ಕಣ್ಣಿನ ಆಸ್ಪತ್ರೆ ಕೊಯಮತ್ತೂರಿಗೆ ಕಳುಹಿಸಿ ಕೊಡಲಾಯಿತು.
ನಗರಸಭೆ ಮಾಜಿ ಅಧ್ಯಕ್ಷೆ ರೇಖಾ ರಮೇಶ್, ಮಾಜಿ ಸದಸ್ಯ ಜಿ.ಹರ್ಷ, ಮುಖಂಡರಾದ ಗಿರೀಶ್ ಜಡೆ, ನಾಗರಾಜು ಅರವಿಂದ ಕಣ್ಣಿನ ಆಸ್ಪತ್ರೆಯ ಡಾ.ಸುಬ್ಬಲಕ್ಷ್ಮೀ, ಡಾ.ಸುಜಾತ, ಡಾ.ಮೇನಕಾ, ಅರವಿಂದ ಕಣ್ಣಿನ ಆಸ್ಪತ್ರೆಯ ಸಂಯೋಜಕ ವಿಜಯ್ ಕುಮಾರ್, ವಿಶ್ವಚೇತನವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ರವಿತೇತ, ಚೇತನ್ ರಾಜ್, ಲಕ್ಷ್ಮಣ್ ಶೆಟ್ಟಿ, ಸಿದ್ದಾರ್ಥ್ ಹಾಗು ಸಂಸ್ಥೆ ಸಿಬ್ಬಂದಿ ವರ್ಗ ಇದ್ದರು.