ಮಾರ್ಟಳ್ಳಿ ಲೂರ್ದು ಮಾತೆಯ ದೇಗುಲದಲ್ಲಿ ಆಯೋಜಿಸಿದ್ಧ ಈಸ್ಟರ್ ಹಬ್ಬದಲ್ಲಿ ಕ್ರೈಸ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಹನೂರು : ತಾಲೂಕಿನ ಮಾರ್ಟಳ್ಳಿ ಲೂರ್ದು ಮಾತೆಯ ದೇಗುಲದಲ್ಲಿ ಭಾನುವಾರ ಕ್ರೈಸ್ತರು ವಿಶೇಷ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಭಕ್ತಿಭಾವದಿಂದ ಈಸ್ಟರ್ ಹಬ್ಬವನ್ನು ಆಚರಿಸಿದರು.
ಈಸ್ಟರ್ ಹಬ್ಬದ ಹಿನ್ನೆಲೆ ದೇಗುಲವನ್ನು ವಿವಿಧ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯರಾತ್ರಿ ಹಾಗೂ ಮುಂಜಾನೆ ವಿವಿಧ ಧರ್ಮಗುರುಗಳ ಸಮ್ಮುಖದಲ್ಲಿ ನಡೆದ ವಿಶೇಷ ದಿವ್ಯ ಬಲಿಪೂಜೆಯಲ್ಲಿ ಮಾರ್ಟಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದ ಸಾವಿರಾರು ಕ್ರೈಸ್ತರು ಭಾಗಿಯಾಗಿದ್ದರು. ಮೇಣದ ಬತ್ತಿಯನ್ನು ಹಿಡಿದು ಯೇಸುವಿನ ಪುನರುತ್ಥಾನವನ್ನು ಸ್ತುತಿಸುವ ಗೀತೆಗಳನ್ನು ಹಾಡುತ್ತಾ ಭಕ್ತಿ ಪೂರ್ವಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈಸ್ಟರ್ ಹಬ್ಬವು ಮರಣದ ಮೇಲಿನ ವಿಜಯ ಹಾಗೂ ಹೊಸ ಜೀವನದ ಆರಂಭವನ್ನು ಸೂಚಿಸುತ್ತದೆ. ಜಗತ್ತಿನಲ್ಲಿ ಶಾಂತಿ ನೆಲೆಸಲಿ. ಮಾನವರಲ್ಲಿ ಪ್ರೀತಿ ಬೆಳೆಯಲಿ ಎಂಬ ಸಂದೇಶದೊಂದಿಗೆ ಧರ್ಮಗುರುಗಗಳು ಬೋಧನೆ ನೀಡಿದರು. ಈ ಸಂದರ್ಭದಲ್ಲಿ ಚರ್ಚ್‌ನ ಧರ್ಮಗುರು ಫಾದರ್ ಡಾ.ಎಂ ವಿನ್ಸೆಂಟ್, ಸಹಾಯಕ ಧರ್ಮಗುರು ಪ್ರಕಾಶ್ ಇತರರಿದ್ದರು.