ಚಾಮರಾಜನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಾನಪದ ಕಲಾವಿದ ಕೈಲಾಶಮೂರ್ತಿ ಅವರ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಿವ್ಯಾ ಆಲೂರು, ಜನಾರ್ಧನ್ ಜನ್ನಿ, ಮಲ್ಲಿಕಾರ್ಜುನಸ್ವಾಮಿ, ಮಹದೇವ ಶಂಕನಪುರ, ಸಿ.ಎಂ.ನರಸಿಂಹಮೂರ್ತಿ, ಹೊನ್ನಮ್ಮ ಇತರರಿದ್ದರು.
- ನಿರೂಪಕಿ ದಿವ್ಯಾ ಆಲೂರು ಆಗ್ರಹ
- ಕೈಲಾಶಮೂರ್ತಿ ನುಡಿ-ನಮನ ಕಾರ್ಯಕ್ರಮ
- ಹಲವಾರು ಕಲಾವಿದರು ಭಾಗಿ
ಚಾಮರಾಜನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಾನಪದ ಕಲಾವಿದ ಕೈಲಾಶಮೂರ್ತಿ ಅವರ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಿವ್ಯಾ ಆಲೂರು, ಜನಾರ್ಧನ್ ಜನ್ನಿ, ಮಲ್ಲಿಕಾರ್ಜುನಸ್ವಾಮಿ, ಮಹದೇವ ಶಂಕನಪುರ, ಸಿ.ಎಂ.ನರಸಿಂಹಮೂರ್ತಿ, ಹೊನ್ನಮ್ಮ ಇತರರಿದ್ದರು.
ಚಾಮರಾಜನಗರ: ಜಾನಪದ ಕಲಾವಿದರು ಸಂಕಷ್ಟಕ್ಕೆ ಒಳಗಾದ ಸಂದರ್ಭದಲ್ಲಿ ಆರ್ಥಿಕ ಸಹಾಯ ನೀಡುವ ಸಲುವಾಗಿ ಸರ್ಕಾರ ಜಾನಪದ ಕಲಾವಿದರಿಗೆ ಕ್ಷೇಮನಿಧಿಯನ್ನು ಸ್ಥಾಪಿಸಬೇಕಿದೆ ಎಂದು ನಿರೂಪಕಿ ದಿವ್ಯಾ ಆಲೂರು ಒತ್ತಾಯಿಸಿದರು.
ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕೈಲಾಶಮೂರ್ತಿ ಆತ್ಮೀಯರ ಬಳಗದಿಂದ ಇತ್ತೀಚೆಗೆ ಆಯೋಜಿಸಿದ್ದ ಜಾನಪದ ಕಲಾವಿದ ಕೈಲಾಶಮೂರ್ತಿ ಸ್ಮರಣಾರ್ಥ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಾಡಿಗೆ ಜಾನಪದ ಕಲಾವಿದರ ಕೊಡುಗೆ ಅಪಾರವಾಗಿದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಜಾನಪದ ಕಲಾವಿದರು ತುಂಬಾ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಅವರ ಆರ್ಥಿಕ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರಗಳು ಚಿಂತನೆ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಕೈಲಾಶಮೂರ್ತಿ ಅವರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ರಂಗಾಯಣ ಮಾಜಿ ನಿರ್ದೇಶಕ ಜನಾರ್ಧನ್ ಜನ್ನಿ ಮಾತನಾಡಿ, ಜಾನಪದ ಕಲಾವಿದರನ್ನು ಕಳೆದುಕೊಳ್ಳುವುದು ಒಂದು ಸಂಪತ್ತನ್ನೇ ಕಳೆದುಕೊಂಡಂತೆ. ಕಲಾವಿದ ಕೈಲಾಶಮೂರ್ತಿ ಅವರ ನಿಧನದಿಂದ ಅವರ ಕುಟುಂಬವೇ ಸಂಕಷ್ಟಕ್ಕೆ ಸಿಲುಕಿದೆ. ಎಲ್ಲರೂ ಒಡಗೂಡಿ ಆದಷ್ಟು ಸಹಾಯ ಮಾಡಬೇಕಿದೆ ಎಂದರು. ಸಾಹಿತಿ ಮಹದೇವಶಂಕನಪುರ ಮಾತನಾಡಿ, ಕೈಲಾಶಮೂರ್ತಿ ಅವರ ಕುಟುಂಬ ಮೂಲತಃ ತ್ವತ್ವಪದಗಳನ್ನು ಹಾಡುವ ಕಲಾವಿದರಾಗಿದ್ದರು. ಅವರ ಅಗಲಿಕೆ ಜಾನಪದದ ಒಂದು ವಿಶಿಷ್ಟ ಪರಂಪರೆಯನ್ನು ಕಳೆದುಕೊಂಡಂತಾಗಿದೆ ಎಂದರು.
ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಯಾವುದೇ ಜಾನಪದ ಕಲಾವಿದ ಸಂಕಷ್ಟಕ್ಕೆ ಸಿಲುಕಿದಾಗ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಸಾರುವುದು ಇದರ ಉದ್ದೇಶವಾಗಿದೆ. ನಾವು ಸ್ವಾರ್ಥಕ್ಕಾಗಿ ಕಾರ್ಯಕ್ರಮ ಮಾಡುತ್ತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಹಿರಿಯ ರಂಗಕರ್ಮಿ ಕೆ.ವೆಂಕಟರಾಜು, ಮುಡಿಗುಂಡಮೂರ್ತಿ, ಅರುಣ್‌ಕುಮಾರ್, ಸೋಬಾನೆ ಕಲಾವಿದರಾದ ಹೊನ್ನಮ್ಮ, ಚಿನ್ನಮ್ಮ ಹಾಗೂ ಇತರರು ಹಾಜರಿದ್ದರು.