ಗುಂಡ್ಲುಪೇಟೆ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಎದುರು ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಎ.ಸಿದ್ದರಾಜು ಭೂಮಿ ಪೂಜೆ ನೆರವೇರಿಸಿದರು. ಗೋಪಾಲ್, ನಂಜಪ್ಪ, ಸೋಮಣ್ಣ ಇದ್ದರು. 
ಚಾಮರಾಜನಗರ

ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಸಮಾನತೆ ಸಾಧ್ಯ

ಬಾಲಮುರಳಿಕೃಷ್ಣ
ಗುಂಡ್ಲುಪೇಟೆ: ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಸಮಾನತೆ ಸಾಧ್ಯ ಎಂದು ಲೋಕಸಭಾ ಮಾಜಿ ಸದಸ್ಯ ಎ.ಸಿದ್ದರಾಜು ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದ ಎದುರು ಶನಿವಾರ ಡಾ. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸಮಾಜದಲ್ಲಿ ಎಲ್ಲರಿಗೂ ಸಮಾನತೆ ದೊರಕಬೇಕಾದರೆ ಶಿಕ್ಷಣ ಒಂದರಿಂದ ಮಾತ್ರ ಸಾಧ್ಯ ಎಂದು ಅಂಬೇಡ್ಕರ್ ಬಲವಾಗಿ ನಂಬಿದ್ದರು. ಅವರು ಸಂವಿಧಾನ ರಚನೆ ಸಂದರ್ಭದಲ್ಲಿ ದೂರದೃಷ್ಟಿಯ ಪರಿಣಾಮ ಸಮಾಜದ ಶೋಷಿತ ವರ್ಗದ ಜನರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಹೆಣ್ಣು ಗಂಡು ಅಂತ ಭೇದ-ಭಾವ ಮಾಡದೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದರಿಂದ ಹಿಂದುಳಿದ ವರ್ಗಗಳ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ನಾವು 21ಶತಮಾನದದಲ್ಲಿ ಇದ್ದರೂ ದಬ್ಬಾಳಿಕೆ ತಪ್ಪಿಲ್ಲ. ಹಳ್ಳಿಗಳ್ಳಲ್ಲಿ ಇನ್ನೂ ಬಹಿಷ್ಕಾರ ಪದ್ಧತಿ ಇದ್ದು ಇದನ್ನು ಹೋಗಲಾಡಿಸಬೇಕು ಎಂದು ಹೇಳಿದರು.
ಮುಖಂಡ ಹೊರೆಯಲ ಗೋಪಾಲ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಮಾಜಿ ಸದಸ್ಯರಾದ ಕೆ.ಎಸ್.ಮಹೇಶ್, ಬಿ.ಕೆ. ಬೊಮ್ಮಯ್ಯ, ಶಿವಸ್ವಾಮಿ, ಮುಖಂಡರಾದ ಮಲ್ಲರಾಜು, ಸೋಮಣ್ಣ, ಚಂದ್ರುಶೇಖರ್, ಶಿವಕುಮಾರ್, ರಾಜು, ಮಧುಸೂದನ್, ಹೆಗ್ಗವಾಡಿ ಕೆಂಪರಾಜು, ರಾಜುಕುಮಾರ್, ಗೋವಿಂದರಾಜು, ಸಂಪತ್ತು, ರಾಜಗೋಪಾಲ್ ಇತರರಿದ್ದರು.