ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಲಕ್ಷ್ಮಮ್ಮ ಸೊಸಯ್ಯನ ಸಿದ್ದಯ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ಭಾನುವಾರ ನಡೆದ ಸತ್ತೇಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ 12 ನಿರ್ದೇಶಕರು ಜಯ ಗಳಿಸಿದರು.
ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (5ವರ್ಷದ ಅವಧಿ) ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ನಡೆದಿದ್ದು 12 ನಿರ್ದೇಶಕರು ಜಯ ಗಳಿಸಿದ್ದಾರೆ.
ಗ್ರಾಮದ ಲಕ್ಷ್ಮಮ್ಮ ಸೊಸಯ್ಯನ ಸಿದ್ದಯ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ನಡೆದ ಸತ್ತೇಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ನವೀನ್‌ಕುಮಾರ್ (128 ಮತಗಳು), ಸಿ.ಭಾಸ್ಕರ್ (122), ಎಂ.ಮಲ್ಲೇಶ್ (116), ಮಲ್ಲಿಕಾರ್ಜುನಸ್ವಾಮಿ (114), ಎಂ.ಶಂಕರೇಗೌಡ (114), ಮಂಜುಳಾ (102), ಜಿ.ಶಾಂತರಾಜು (115), ಸೋಮಶೇಖರ್ (208), ದೊಡ್ಡಮ್ಮ (118) ಮತಗಳನ್ನು ಪಡೆದು ಜಯ ಗಳಿಸಿದ್ದಾರೆ. ಇನ್ನು ಕಾಂತು, ಕೆ.ರಾಜುಗೋಪಾಲ್, ಚೆಲುವನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಲಾಟರಿ ಮೂಲಕ ಇಬ್ಬರು ಆಯ್ಕೆ: ಮಲ್ಲಿಕಾರ್ಜುನಸ್ವಾಮಿ, ಶಿವಕುಮಾರ್, ಎಂ.ಶಂಕರೇಗೌಡರಿಗೆ 114 ಮತಗಳು ಬಂದಿದ್ದವು. ಇದರಲ್ಲಿ ಇಬ್ಬರಿಗೆ ಮಾತ್ರ ಗೆಲುವಿಗೆ ಅವಕಾಶವಿರುವುದರಿಂದ ಲಾಟರಿಯಲ್ಲಿ ಶಿವಕುಮಾರ್ ಸೋಲು ಅನುಭವಿಸಿದ್ದಾರೆ. ಚುನಾವಣಾಧಿಕಾರಿ ನಾಗೇಶ್ ಅವರು ಚುನಾವಣೆ ಪ್ರಕ್ರಿಯೆ ನಡೆಸಿದರು. ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್‌ಐ ಚೆಲುವರಾಜು ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.