ಮಂಗಲದ ಮೂಡಲ ಬೀದಿಯ ಚರಂಡಿಯಲ್ಲಿ ಸಂಗ್ರಹವಾಗಿದ್ದ ಹೂಳು ತೆರವುಗೊಳಿಸಲಾಯಿತು.
ಹನೂರು: ತಾಲೂಕಿನ ಮಂಗಲ ಗ್ರಾಮದ ಮೂಡಲ ಬೀದಿಯ ಚರಂಡಿಯಲ್ಲಿ ತುಂಬಿದ್ದ ಹೂಳನ್ನು ಬುಧವಾರ ಗ್ರಾಮ ಪಂಚಾಯಿತಿಯಿಂದ ತೆರೆವುಗೊಳಿಸಲಾಯಿತು.
ಬೀದಿಯ ಚರಂಡಿಯಲ್ಲಿ ಹೂಳು ತೆಗೆದು ಹಲವು ತಿಂಗಳಾಗಿತ್ತು. ಪರಿಣಾಮ ಚರಂಡಿಯಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯ ತುಂಬಿತ್ತು. ಇದರಿಂದ ಕೊಳಚೆ ನೀರು ಹರಿಯಲು ಸಾಧ್ಯವಾಗದೆ ಮಡುಗಟ್ಟು ನಿಂತು ದುರ್ವಾಸನೆ ಬೀರುತ್ತಿತ್ತು. ಬೀದಿಯಲ್ಲಿ ಅನೈರ್ಮಲ್ಯ ಮನೆ ಮಾಡಿದ್ದ ಪರಿಣಾಮ ಸೊಳ್ಳೆಗಳ ಕಾಟ ವಿಪರೀತವಾಗಿತ್ತು. ಇಲ್ಲಿನ ನಿವಾಸಿಗಳಲ್ಲಿ ರೋಗ ಹರಡುವ ಆತಂಕ ಎದುರಾಗಿತ್ತು. ಹೂಳು ತೆರವುಗೊಳಿಸುವಂತೆ ಜನಪ್ರತಿನಿಧಿಗಳು ಹಾಗೂ ಪಿಡಿಒ ಅವರಲ್ಲಿ ಹಲವು ಬಾರಿ ಮನವಿ ಮಾಡಿದರೂ ಕಿಂಚಿತ್ತೂ ಗಮನಹರಿಸಿರಲಿಲ್ಲ. ಇದರಿಂದ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದರು.
ಈ ಕುರಿತು ಜ.31ರಂದು ‘ಮಂಗಲದ ಮೂಡಲ ಬೀದಿಯಲ್ಲಿ ದುರ್ನಾತ’ ಶೀರ್ಷಿಕೆಯಡಿ ವರದಿ ಪ್ರಟಕವಾಗಿತ್ತು. ಈ ಬಗ್ಗೆ ಪಿಡಿಒ ಅವರ ಗಮನಕ್ಕೂ ತರಲಾಗಿತ್ತು. ಎಚ್ಚೆತ್ತ ಪಿಡಿಒ ಕೂಲಿ ಕಾರ್ಮಿಕರಿಂದ ಚರಂಡಿ ಹೂಳು ತೆರವುಗೊಳಿಸಿದ್ದಾರೆ. ಹಾಗೆಯೇ ತೆರವುಗೊಳಿಸಿ ರಸ್ತೆ ಬದಿಯಲ್ಲಿರುವ ತ್ಯಾಜ್ಯವನ್ನು ಒಣಗಿದ ಕೂಡಲೇ ವಿಲೇವಾರಿ ಮಾಡುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.