ಗುಂಡ್ಲುಪೇಟೆ ತಾಲೂಕಿನ ಕರಕಲಮಾದಹಳ್ಳಿ ಗ್ರಾಮದ ಡಾ.ವಿ.ಇಂಪು ಅವರಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಆಫ್ ಕಾಲೇಜು ಪ್ರಶಸ್ತಿ ಪ್ರದಾನ ಮಾಡಿದರು. ಡಾ.ಎಸ್.ಎನ್.ಶ್ರೀಧರ್, ಸಿ.ಕೆ.ಸುಬ್ಬಯ್ಯ, ಕೆ.ಎಂ.ಶಿವಕುಮಾರ್ ಇದ್ದರು. 
ಚಾಮರಾಜನಗರ

ಡಾ.ವಿ.ಇಂಪುಗೆ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಪ್ರಶಸ್ತಿ

ಗುಂಡ್ಲುಪೇಟೆ: ಆದಿಚುಂಚನಗಿರಿ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಡೆಸಿದ ಪರೀಕ್ಷೆಯ 5 ವಿಭಾಗಗಳಲ್ಲಿ ತಾಲೂಕಿನ ಕರಕಲಮಾದಹಳ್ಳಿ ಗ್ರಾಮದ ಡಾ.ವಿ.ಇಂಪು ಅವರು ಹೆಚ್ಚಿನ ಅಂಕಪಡೆದು ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಆಫ್ ಕಾಲೇಜು ಪ್ರಶಸ್ತಿ ಪಡೆದುಕೊಂಡಿದ್ದಾರೆ.
2025-2026 ನೇ ಸಾಲಿನ ಎಂಬಿಬಿಎಸ್ ಘಟಿಕೋತ್ಸವದ ಅಂಗವಾಗಿ ಏ.22ರಂದು ನಾಗಮಂಗಲದ ಆದಿಚುಂಚನಗಿರಿ ವಿವಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ವಿವಿ ಉಪಕುಲಪತಿ ಡಾ.ಎಸ್.ಎನ್.ಶ್ರೀಧರ್, ರಿಜಿಸ್ಟ್ರಾರ್ ಸಿ.ಕೆ.ಸುಬ್ಬಯ್ಯ, ಪ್ರಿನ್ಸಿಪಾಲ್ ಎಂ.ಜಿ.ಶಿವರಾಮು, ಟ್ರಸ್ಟಿ ದೇವರಾಜು, ಆಸ್ಪತ್ರೆ ಮುಖ್ಯಸ್ಥ ಕೆ.ಎಂ.ಶಿವಕುಮಾರ್ ಇತರರು ಇದ್ದರು.
ಡಾ.ವಿ.ಇಂಪು ಅವರು ಗುಂಡ್ಲುಪೇಟೆ ತಾಲೂಕಿನ ಶಿವಪುರ ಜೆಎಸ್‌ಎಸ್ ಪ್ರೌಢಶಾಲೆ ಮುಖ್ಯಶಿಕ್ಷಕ ಕೆ.ಸಿ.ವಿಶ್ವೇಶ್ವರಯ್ಯ ಹಾಗೂ ಡಿ.ಎಂ.ಆಶಾ ದಂಪತಿ ಪುತ್ರಿ.