ಗುಂಡ್ಲುಪೇಟೆ ವೈದ್ಯರ ದಿನದ ಅಂಗವಾಗಿ ಆಯುಷ್ ವೈದ್ಯ ಡಾ.ಗುರುಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. 
ಚಾಮರಾಜನಗರ

ಗುಂಡ್ಲುಪೇಟೆಯಲ್ಲಿ ಡಾಕ್ಟರ್ಸ್‌ ಡೇ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ಆಯುಷ್ ವೈದ್ಯ ಡಾ.ಗುರುಪ್ರಸಾದ್‌ಗೆ ಸನ್ಮಾನ
ಗುಂಡ್ಲುಪೇಟೆ: ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಕನ್ನಡ ಸಂಘಟನೆ ವತಿಯಿಂದ ಪಟ್ಟಣದ ಆಯುಷ್ ಇಲಾಖೆ ವೈದ್ಯರಾದ ಡಾ.ಗುರುಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಉತ್ತಮ ಸೇವೆ ವೈದ್ಯರಿಗೆ ಕರ್ನಾಟಕ ಕಾವಲು ಪಡೆ ವತಿಯಿಂದ ಸನ್ಮಾನ ಮಾಡುವ ಮೂಲಕ ವೈದ್ಯ ದಿನವನ್ನು ಆಚರಿಸಿದರು.
ಗೌರವ ಸ್ವೀಕರಿಸಿದ ಡಾ.ಗುರುಪ್ರಸಾದ್ ಮಾತನಾಡಿ, ಆಯುರ್ವೇದ ಆಸ್ಪತ್ರೆಯಲ್ಲಿ ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡುವುದು ವೈದ್ಯರಾಗಿ ನಮ್ಮ ಕರ್ತವ್ಯವಾಗಿದೆ. ಹೆಚ್ಚಿನ ಜನರು ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು. ಜನರ ಪ್ರೀತಿ ವಿಶ್ವಾಸವಷ್ಟೇ ನಮಗೆ ನೀವು ಕೊಡುವ ಗೌರವ ಎಂದು ತಿಳಿಸಿದರು.
ಸಂಘಟನೆ ತಾಲೂಕು ಅಧ್ಯಕ್ಷ ಎ.ಅಬ್ದುಲ್‌ಮಾಲಿಕ್, ಟೌನ್ ಉಪಾಧ್ಯಕ್ಷ ಸಾದಿಕ್‌ಪಾಷ, ಸಂಚಾಲಕ ಮಿಮಿಕ್ರಿರಾಜು, ವೈದ್ಯರಾದ ನಿಶ್ಚಲ, ಚೈತ್ರಾ, ನೌಕರರಾದ ಚಂದ್ರಪ್ಪ ಅರಳೀಕಟ್ಟೆ, ರವಿನಾಯಕ ಇತರರು ಹಾಜರಿದ್ದರು.