ಹನೂರಿನಲ್ಲಿ ಪ್ರಸವದ ಸಮಸ್ಯೆ ಎದುರಿಸುತ್ತಿದ್ದ ಹಸುವಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಕರು ಹೊರ ತೆಗೆಯಲಾಯಿತು.  
ಚಾಮರಾಜನಗರ

ಶಸ್ತ್ರಚಿಕಿತ್ಸೆ ಮಾಡಿ ಕರು ಹೊರತೆಗೆದ ವೈದ್ಯರು

ಪ್ರಮುಖ ಮುಖ್ಯಾಂಶಗಳು

  • ಸುಳವಾಡಿ ಗ್ರಾಮದಲ್ಲಿ ಪ್ರಸವದ ಸಮಸ್ಯೆ ಎದುರಿಸುತ್ತಿದ್ದ ಹಸು

ಹನೂರು:

ತಾಲೂಕಿನ ಸುಳವಾಡಿ ಗ್ರಾಮದಲ್ಲಿ ಪ್ರಸವದ ಸಮಸ್ಯೆ ಎದುರಿಸುತ್ತಿದ್ದ ಹಸುವಿಗೆ ಶನಿವಾರ ಪಶು ವೈದ್ಯಾಧಿಕಾರಿ ಡಾ. ಶಿವರಾಜು ಶಸ್ತ್ರ ಚಿಕಿತ್ಸೆ ನಡೆಸಿ ಕರು ಹೊರತೆಗೆದರು.

ಗ್ರಾಮದ ಮೋಹನ್ ಅರುಳ್‌ರಾಜ್ ಅವರ ಹಸುವಿಗೆ ಶನಿವಾರ ಪ್ರಸವದ ವೇಳೆ ಕರುವಿನ ಕಾಲು ಮಾತ್ರ ಹೊರಕ್ಕೆ ಬಂದಿತ್ತು. ಹಲವು ಗಂಟೆಗಳ ಕಾಲ ಕಾದರೂ ಕರು ಹೊರ ಬಾರದೆ ಮೃತಪಟ್ಟಿತ್ತು. ಇದರಿಂದ ಹಸು ನಿತ್ರಾಣಗೊಂಡಿತ್ತು. ಮೋಹನ್ ಅವರು ಪಶು ವೈದ್ಯಾಧಿಕಾರಿ ಡಾ. ಶಿವರಾಜು ಅವರ ಗಮನಕ್ಕೆ ತಂದರು. ಬಳಿಕ ಪಶು ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ ಕರು ಹೊರ ತೆಗೆಯಲಾಯಿತು. ಹಸು ಆರೋಗ್ಯವಾಗಿದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ.