ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಟ್ರ್ಯಾಕ್ ಸೂಟ್‌ಗಳನ್ನು ಗಣ್ಯರು ವಿತರಿಸಿದರು. ಆಸ್ಟ್ರೀನ ಥಾಮಸ್, ರೇಷ್ಮಾ ಗೋಯಲ್, ಮೋಹನ್, ಅಪ್ಪಣ್ಣ, ವಿಜಯರ್ ಇತರರಿದ್ದರು.
ಗುಂಡ್ಲುಪೇಟೆ: ತಾಲೂಕಿನ ಬೊಮ್ಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬೆಂಗಳೂರಿನ ಆಕ್ವಿನ್ ಫೈನಾನ್ಸಿಯಲ್ ಸಲೂಷನ್ ಸಂಸ್ಥೆಯ ವತಿಯಿಂದ ಸೋಮವಾರ ಉಚಿತವಾಗಿ ಉತ್ತಮ ಗುಣಮಟ್ಟದ ಟ್ರ್ಯಾಕ್ ಸೂಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಆಸ್ಟ್ರಿನ್ ಥಾಮಸ್, ರೇಷ್ಮಾ ಘೋಯಲ್, ಮೋಹನ್, ಅಪ್ಪಣ್ಣ, ವಿಜಯ್, ಜಂಗಲ್ ರೆಸಾರ್ಟ್‌ನ ಕೃಷ್ಣ, ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದರಾಜು, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಮಂಜು, ಮುಖ್ಯಶಿಕ್ಷಕ ಶಿವಯ್ಯ, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಪಾಲಕರು ಇದ್ದರು.