ಕೊಳ್ಳೇಗಾಲದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಅಕ್ಕನ ಬಳಗ ಆಯೋಜಿಸಿದ್ದ ಲಿಂಗೈಕ್ಯ ಮಾಜಿ ಸಚಿವ ಎಚ್.ನಾಗಪ್ಪ ಕಾಮಗೆರೆ ದತ್ತಿ ಕಾರ್ಯಕ್ರಮದಲ್ಲಿ ಪರಿಮಳಾ ನಾಗಪ್ಪ, ಎಸ್.ನಾಗರಾಜು ಕೊಂಗರಹಳ್ಳಿ, ಶಿವಣ್ಣ ಇದ್ವಾಂಡಿ, ಗೀತಾ ಮಂಜುನಾಥ್, ಸವಿತಾ ಲೋಕೇಶ್ ಇದ್ದರು. 
ಚಾಮರಾಜನಗರ

ದಿ.ಎಚ್.ನಾಗಪ್ಪ ಜನಸೇವೆಗೆ ಜೀವನ ಮುಡಿಪಾಗಿಟ್ಟಿದ್ದರು

ಪತ್ನಿ ಪರಿಮಳಾ ನಾಗಪ್ಪ ಹೇಳಿಕೆ ದತ್ತಿ ಕಾರ್ಯಕ್ರಮ

ಕೊಳ್ಳೇಗಾಲ: ದಿ.ಎಚ್.ನಾಗಪ್ಪ ಅವರು ಸರಳ, ಸಜ್ಜನಿಕೆ ವ್ಯಕ್ತಿಯಾಗಿದ್ದರೂ ರಾಜಕೀಯ ಜೀವನವನ್ನು ಜನರ ಸೇವೆಗೆ ಮುಡಿಪಾಗಿಟ್ಟಿದ್ದರು ಎಂದು ಮಾಜಿ ಶಾಸಕಿ ಹಾಗು ಮಾಜಿ ಸಚಿವ ದಿ.ಎಚ್.ನಾಗಪ್ಪ ಅವರ ಪತ್ನಿ ಪರಿಮಳಾ ನಾಗಪ್ಪ ಹೇಳಿದರು.
ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಅಕ್ಕನ ಬಳಗ ವತಿಯಿಂದ ಆಯೋಜಿಸಿದ್ದ ಲಿಂಗೈಕ್ಯ ಮಾಜಿ ಸಚಿವ ಎಚ್.ನಾಗಪ್ಪ ಕಾಮಗೆರೆ ದತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನನ್ನ ಪತಿ ಎಚ್.ನಾಗಪ್ಪ ಅವರು ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಬದುಕಿದವರು. ನಮಗೆಲ್ಲ ಸನ್ಮಾರ್ಗದಲ್ಲಿ ನಡೆಯುವ ದಾರಿ ತೋರಿಸಿದವರು. ಅವರ ಮಾರ್ಗದಲ್ಲಿಯೇ ನಾವು ನಡೆಯುತ್ತಿದ್ದೇವೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಬಿ.ಕೆ.ರವಿಕುಮಾರ್ ಮಾತನಾಡಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ನಮಗೆಲ್ಲ ದಾರಿ ದೀಪವಾಗಿದ್ದಾರೆ. ಈ ದಿವಸ ನಾಗಪ್ಪ ಅವರ ಹೆಸರಿನಲ್ಲಿ ದತ್ತಿ ನಡೆಯುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ತಿಳಿಸಿದರು.
ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಕೊಂಗಳಪ್ಪ, ಸಾಹಿತಿ ಶಿವಣ್ಣ ಇದ್ವಾಂಡಿ, ಅಕಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ, ಅಕ್ಕನ ಬಳಗದ ಅಧ್ಯಕ್ಷೆ ಸವಿತಾ ಲೋಕೇಶ್, ಕದಳಿ ವೇದಿಕೆ ಅಧ್ಯಕ್ಷೆ ರೂಪಾ ತೋಟೇಶ್, ಕಾರ್ಯದರ್ಶಿ ಗೀತಾ ಮಂಜುನಾಥ್, ಬಸವ ಸೇವಾ ನೌಕರರ ಸಂಘದ ಅಧ್ಯಕ್ಷ ಇಂದ್ರಕುಮಾರ್, ಶಿವಸ್ವಾಮಿ, ಪ್ರಕಾಶ್ ಮೂರ್ತಿ ಮತ್ತಿತರರಿದ್ದರು.