ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಚಿಗುರು ಕಾರ್ಯಕ್ರಮವನ್ನು ಡಿವೈಎಸ್ಪಿ ಸ್ನೇಹಾರಾಜ್ ಉದ್ಘಾಟಿಸಿದರು. ವೆಂಕಟನಾಗಪ್ಪ ಶೆಟ್ಟಿ, ಸುರೇಶ್ ಎನ್.ಋಗ್ವೇದಿ, ಡಾ.ಶ್ವೇತಾ ಶಶಿಧರ್, ಕೆ.ವಿ.ರಾಜಣ್ಣ, ರಾಘವೇಂದ್ರ ಇನ್ನಿತರರಿದ್ದರು.  
ಚಾಮರಾಜನಗರ

ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ

ಎ.ಎಸ್.ಮಣಿಕಂಠ

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್ಪಿ ಸ್ನೇಹಾರಾಜ್ ಸಲಹೆ
  • ಯೂಥ್ ಾರ್ ಸೇವಾ ಸಂಸ್ಥೆ ವತಿಯಿಂದ ಆಯೋನೆ
  • ಮಕ್ಕಳಿಗಾಗಿ ರೂಪಿಸಿರುವ ಚಿಗುರು ಕಾರ್ಯಕ್ರಮ
ಚಾಮರಾಜನಗರ: ಮಕ್ಕಳು ಬಾಲ್ಯದಿಂದಲೇ ಪಠ್ಯೇತರ ಚಟುವಟಿಕೆಗಳತ್ತ ಆಸಕ್ತಿ ಬೆಳೆಸಿಕೊಳ್ಳುವುದರಿಂದ ಉತ್ತಮ ವಿಧ್ಯೆಭ್ಯಾಸಕ್ಕೆ ಸಹಕಾರಿಯಾಗಲಿದೆ ಎಂದು ಡಿವೈಎಸ್ಪಿ ಸ್ನೇಹಾರಾಜ್ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಯೂಥ್ ಾರ್ ಸೇವಾಸಂಸ್ಥೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಚಿಗುರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಪಾಲಕರು, ಶಿಕ್ಷಕರು ಮತ್ತು ಸಂಘ-ಸಂಸ್ಥೆಗಳು ಪ್ರೋತ್ಸಾಹ ನೀಡಿದಾಗ ಮಕ್ಕಳ ವಿಕಾಸ ಉಂಟಾಗಿ ಬೆಳವಣಿಗೆಗೆ ಸಹಾಯಕವಾಗುತ್ತದೆ. ನೂರಾರು ಉತ್ತಮ ಕಥೆಯ ಪುಸ್ತಕಗಳು ಇದ್ದು ಅವುಗಳನ್ನು ಸಂಗ್ರಹಿಸಿ ಓದಬೇಕು. ಪಾಲಕರು ಪುಸ್ತಕಗಳನ್ನು ತಾವು ಓದಿ ಮಕ್ಕಳು ಓದುವಂತೆ ಮಾಡುವುದು ಬಹಳ ಒಳ್ಳೆಯದು. ಪುಸ್ತಕಗಳಿಂದ ಬಹಳಷ್ಟು ವಿದ್ಯಾರ್ಥಿಗಳು ಪ್ರೇರಕರಾಗಿ, ಸ್ವ ಅಧ್ಯಯನ ದಿಂದಉನ್ನತ ಸಾಧನೆಯನ್ನು ಮಾಡಬಹುದಾಗಿದೆ ಎಂದರು.
ಉದ್ಯಮಿ ವೆಂಕಟನಾಗಪ್ಪ ಶೆಟ್ಟಿ ಮಾತನಾಡಿ, ಯೂಥ್ ಾರ್ ಸೇವಾಸಂಸ್ಥೆ ಕಳೆದ ಐದು ವರ್ಷಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ. ಮಕ್ಕಳಿಗಾಗಿ ರೂಪಿಸಿರುವ ಚಿಗುರು ಕಾರ್ಯಕ್ರಮ ಸಾವಿರಾರು ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಪ್ರತಿಭೆಗಳನ್ನು ಸಮಾಜಕ್ಕೆ ಅರ್ಪಿಸುವುದು ಸಂಘ ಸಂಸ್ಥೆಗಳ ಪ್ರಮುಖ ಕಾರ್ಯವಾಗಿದೆ. ಪ್ರತಿಭಾನ್ವಿತರಿಗೆ ವೇದಿಕೆಗಳನ್ನು, ಸ್ಪರ್ಧೆಗಳನ್ನು ಆಯೋಜಿಸಿ ಉತ್ತಮ ಸ್ಥಾನಮಾನವನ್ನು ಗಳಿಸಿಕೊಳ್ಳುವಂತೆ ಆತ್ಮವಿಶ್ವಾಸವನ್ನು ಮೂಡಿಸುವ ಕಾರ್ಯವನ್ನು ಯೂಥ್ ಾರ್ ಸೇವಾಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ತ್ರೀರೋಗ ತಜ್ಞರಾದ ಡಾ.ಶ್ವೇತಾ ಶಶಿಧರ್, ಕರ್ನಾಟಕ ಸರ್ಕಾರದ ಮಾಜಿ ರಾಜ್ಯ ಆಯುಕ್ತ ಕೆ.ವಿ.ರಾಜಣ್ಣ, ರಾಘವೇಂದ್ರ, ಸೋಮವಾರಪೇಟೆ ಗುರುಪ್ರಸಾದ್, ವಿಷ್ಣು, ತೇಜನಾಯಕ್, ಡಾ.ಕಾರ್ತೀಕ್ ಹಾಜರಿದ್ದರು.