ಚಾಮರಾಜನಗರದ ವಿಶ್ವವಿದ್ಯಾನಿಲಯವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಯುವ ರೆಡ್ ಕ್ರಾಸ್, ಎನ್.ಎಸ್.ಎಸ್. ಮತ್ತು ಐ.ಕ್ಯು.ಸಿ ಸಹಭಾಗಿತ್ವದಲ್ಲಿ ಅಭಿವಿನ್ಯಾಸ ಮತ್ತು ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮದಲ್ಲಿ ಗಣಿತಶಾಸ್ತ್ರ ಸಹಪ್ರಾಧ್ಯಾಪಕ ಮತ್ತು ರೆಡ್ ಕ್ರಾಸ್ ಸಂಚಾಲಕ ಎ.ಸಿ. ಚಂದ್ರಶೇಖರ್ ಉದ್ಘಾಟಿಸಿದರು. ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ. ಶ್ವೇತ ಶಶಿಧರ್ ಇತರರು ಇದ್ದರು. 
ಚಾಮರಾಜನಗರ

ಅಭಿವಿನ್ಯಾಸ ಮತ್ತು ಪ್ರಥಮ ಚಿಕಿತ್ಸಾ ತರಬೇತಿ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ
  • ಗಣಿತಶಾಸ್ತ್ರ ಸಹಪ್ರಾಧ್ಯಾಪಕ ಮತ್ತು ರೆಡ್ ಕ್ರಾಸ್ ಸಂಚಾಲಕ ಎ.ಸಿ. ಚಂದ್ರಶೇಖರ್ ಉಪನ್ಯಾಸ
ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾನಿಲಯವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಯುವ ರೆಡ್ ಕ್ರಾಸ್, ಎನ್.ಎಸ್.ಎಸ್. ಮತ್ತು ಐ.ಕ್ಯು.ಸಿ ಸಹಭಾಗಿತ್ವದಲ್ಲಿ ಅಭಿವಿನ್ಯಾಸ ಮತ್ತು ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಗಣಿತಶಾಸ್ತ್ರ ಸಹಪ್ರಾಧ್ಯಾಪಕ ಮತ್ತು ರೆಡ್ ಕ್ರಾಸ್ ಸಂಚಾಲಕ ಎ.ಸಿ. ಚಂದ್ರಶೇಖರ್ ಮಾತನಾಡಿ, ಯುವ ರೆಡ್ ಕ್ರಾಸ್ ಘಟಕದ ಸ್ಥಾಪನೆ, ಉದ್ದೇಶ ಮತ್ತು ಕಾರ್ಯವೈಖರಿಗಳ ಬಗ್ಗೆ ತಿಳಿಸಿದರು.
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ. ಶ್ವೇತ ಶಶಿಧರ್ ಮಾತನಾಡಿ, ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಘಟಕ ಸ್ಥಾಪನೆಯ ಉದ್ದೇಶ, ಅಗತ್ಯತೆ, ಪ್ರಾಮುಖ್ಯತೆ ಹಾಗೂ ಯುವಕರ ಸಹಭಾಗಿತ್ವದ ಅವಶ್ಯಕತೆ ಕುರಿತು ಹಲವು ಸಾಂದರ್ಭಿಕ ಸನ್ನಿವೇಶಗಳನ್ನು ಮನದಟ್ಟು ಮಾಡಿದರು.
ಕಾವೇರಿ ಡೆಂಟಲ್ ಕ್ಲಿನಿಕ್‌ನ ದಂತ ವೈದ್ಯ ಡಾ. ಕೃಪಾಶಂಕರ್ ಮಾತನಾಡಿ, ಅಪಘಾತ ಸಂದರ್ಭದಲ್ಲಿ ತುರ್ತು ಪ್ರಥಮ ಚಿಕಿತ್ಸೆಯನ್ನು ನೀಡಿ ರೋಗಿಯನ್ನು ಸಾವಿನ ದವಡೆಯಿಂದ ಕಾಪಾಡಲು ಇರುವ ಸಾಧ್ಯತೆಗಳು ಹಾಗೂ ಅನುಸರಿಸಬೇಕಾದ ಅಗತ್ಯ ಕ್ರಮಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು. ನಗರದ .ಎಸ್.ಎಸ್. ಆಸ್ಪತ್ರೆಯ ಮೂಳೆ ಮತ್ತು ಕೀಲುರೋಗ ತಜ್ಞರಾದ ಡಾ. ದರ್ಶನ್ ಅವರು ಪ್ರಾತ್ಯಾಕ್ಷಿಕೆ ಮೂಲಕ ಪ್ರಥಮ ಚಿಕಿತ್ಸೆ ನೀಡುವ ವಿಧಾನವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಇದೇ ವೇಳೆ ತಜ್ಞ ವೈದ್ಯರ ತಂಡವು ವಿದ್ಯಾರ್ಥಿಗಳ ಹಲವು ಪ್ರಶ್ನೆ ಮತ್ತು ಗೊಂದಲಗಳನ್ನು ಸಂವಾದದ ಮೂಲಕ ಪರಿಹರಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್.ಎಸ್. ಅಶ್ವಿನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಚಾಮರಾಜನಗರ ವಿಶ್ವವಿದ್ಯಾನಿಲಯದ ರೆಡ್‌ಕ್ರಾಸ್ ಘಟಕದ ನೋಡಲ್ ಅಧಿಕಾರಿ ಹಾಜೀರ ನಸ್ರೀನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ನೀಲಕಂಠಸ್ವಾಮಿ, ಡಾ. ಶಿವಪ್ರಸಾದ್, ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಜಿ. ಮಲ್ಲೇಶ್, ವಾಣಿಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಸಿ.ಎನ್. ನಾರಾಯಣ, ಕನ್ನಡ ಉಪನ್ಯಾಸಕ ಸುರೇಶ್ ಇತರರು ಉಪಸ್ಥಿತರಿದ್ದರು.