ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾದಿಗ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿದರು. ಬಸವನಪುರ ರಾಜಶೇಖರ್, ಎಚ್.ಎಸ್.ನಾಗರಾಜ್, ಬ್ಯಾಂಕ್ ಬಸವರಾಜು, ಹಸಗೂಲಿ ಸಿದ್ದಯ್ಯ, ಅರಕಲವಾಡಿ ನಾಗೇಂದ್ರ, ಎಂ.ಶಿವಕುಮಾರ್, ಶಿವಣ್ಣ, ಕೆಸ್ತೂರು ಮರಪ್ಪ, ಶಿವಕುಮಾರ್, ಸಿ.ಎಚ್.ರಂಗಸ್ವಾಮಿ, ಲಿಂಗರಾಜು, ಬೂದಬಾಳು ಮಹದೇವ ಇನ್ನಿತರರಿದ್ದರು.
- ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ
- ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ
- 56 ಹುದ್ದೆಗಳ ಭರ್ತಿಯಲ್ಲೂ ಒಳಮೀಸಲಾತಿ ಅಳವಡಿಸಲು ಆಗ್ರಹ
ಚಾಮರಾಜನಗರ: ರಾಜ್ಯ ಸರ್ಕಾರ ನ್ಯಾ.ನಾಗಮೋಹನ್‌ದಾಸ್ ವರದಿ ಅನುಸಾರ ಒಳಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಡಾ.ಬಾಬು ಜಗಜೀವನ್ ರಾಮ್ ಮತ್ತು ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಹೊರಟು, ಸತ್ತಿ ರಸ್ತೆ, ಸುಲ್ತಾನ್ ಷರ್ೀ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಶ್ರೀಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಾಣಾಳಿಕೆಯಲ್ಲಿ ಒಳಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿ ಮಾಡುವಂತೆ ತಿಳಿಸಿದ್ದರಿಂದ, ಚಾಮರಾಜನಗರ ಸೇರಿದಂತೆ ರಾಜ್ಯಾದ್ಯಂತ ಮಾದಿಗ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು. ಪರಿಣಾಮವಾಗಿ 135 ಸ್ಥಾನವನ್ನು ಪಡೆದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಅಧಿಕಾರಕ್ಕೆ ಬಂದು 2.5 ವರ್ಷ ಕಳೆದರೂ ಒಳಮೀಸಲಾತಿಯನ್ನು ಜಾರಿಗೊಳಿಸದಿರುವುದು ಅತ್ಯಂತ ಖಂಡನೀಯ ಎಂದರು.
ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಆಯೋಗವನ್ನು ರಚಿಸಿ, ಆ ವರದಿಯನ್ವಯ ಒಳಮೀಸಲಾತಿ ಹಂಚಿಕೆ ಮಾಡದೇ ರಾಜ್ಯ ಸರ್ಕಾರ ಸ್ವಯಂ ಪ್ರೇರಣೆಯಿಂದ ಪರಿಶಿಷ್ಟ ಜಾತಿಯಲ್ಲಿ ಎ,ಬಿ ಮತ್ತು ಸಿ ವರ್ಗಗಳನ್ನಾಗಿ ವಿಂಗಡಿಸಿ ಅಲೆಮಾರಿ ಸಮುದಾಯವನ್ನು ಸಿ ವರ್ಗಕ್ಕೆ ಸೇರಿಸಿ ಅನ್ಯಾಯ ಮಾಡುತ್ತಿದೆ. ಒಳಮೀಸಲಾತಿ ಅಂಗೀಕಾರವಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 56 ಸಾವಿರ ಹುದ್ದೆಗಳನ್ನು ಒಳಮೀಸಲಾತಿ ಇಲ್ಲದೇ ತುಂಬಲು ತೀರ್ಮಾನ ಕೈಗೊಂಡಿರುವುದು ಮಾದಿಗ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕರೆದಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿ ಮಾಡಲು ತೀರ್ಮಾನ ಕೈಗೊಳ್ಳಬೇಕು. 56 ಸಾವಿರ ಹುದ್ದೆಗಳನ್ನು ಹಳೆ ಮೀಸಲಾತಿ ಪದ್ಧತಿಯಂತೆ ತುಂಬಲು ತೀರ್ಮಾನ ಕೈಗೊಂಡಲ್ಲಿ ಶೇ.15 ಮೀಸಲಾತಿಯಲ್ಲಿಯೇ ಒಳಮೀಸಲಾತಿಯನ್ನು ಅಳವಡಿಸಿಕೊಳ್ಳಬೇಕು. ನೇಮಕಾತಿಯಲ್ಲಿ ವಿಶ್ವವಿದ್ಯಾಲಯವನ್ನು ಘಟಕ ಮಾಡಿ ಹುದ್ದೆಗಳನ್ನು ತುಂಬಲು ಸಮಾಜ ಕಲ್ಯಾಣ ಸಚಿವರು ಕೈಗೊಂಡಿರುವ ನಿರ್ಧಾರನ್ನು ಕಡೆಗಣಿಸಬೇಕು. ಉದ್ಯೋಗ, ನೇಮಕಾತಿ, ಬ್ಯಾಕ್‌ಲಾಗ್, ಮುಂಬಡ್ತಿ ಹೊರಗುತ್ತಿಗೆ ನೇಮಕಾತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಳಮೀಸಲಾತಿಯನ್ನು ಅಳವಡಿಸಿಕೊಳ್ಳಬೇಕು. ಎಸ್ಸಿಎಸ್ಪಿ, ಟಿಎಸ್ಪಿ ಹಾಗೂ ಇತರೆ ಆರ್ಥಿಕ ಸವಲತ್ತುಗಳನ್ನು ಜಾರಿಮಾಡುವುದರಲ್ಲಿ ಒಳಮೀಸಲಾತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡ ಬಸವನಪುರ ರಾಜಶೇಖರ್, ಎಚ್.ಎಸ್.ನಾಗರಾಜ್, ಬ್ಯಾಂಕ್ ಬಸವರಾಜು, ಹಸಗೂಲಿ ಸಿದ್ದಯ್ಯ, ಅರಕಲವಾಡಿ ನಾಗೇಂದ್ರ, ಎಂ.ಶಿವಕುಮಾರ್, ಶಿವಣ್ಣ, ಕೆಸ್ತೂರು ಮರಪ್ಪ, ಶಿವಕುಮಾರ್, ಸಿ.ಎಚ್.ರಂಗಸ್ವಾಮಿ, ಲಿಂಗರಾಜು, ಬೂದಬಾಳು ಮಹದೇವ, ಹನೂರು ಶಿವಸ್ವಾಮಿ, ಮೂಡಹಳ್ಳಿ ಮೂರ್ತಿ, ಸುರೇಶ್, ಇಂದೋಡಿ ಮುತ್ತುರಾಜ್, ಗುರುಲಿಂಗಯ್ಯ, ಸಂತೇಮರಹಳ್ಳಿ ರಾಜು, ದುಂಡಮ್ಮ, ಶಿವಮಲ್ಲು, ದ್ವಾರ್ಕಿ, ಜವರಪ್ಪ, ವಕೀಲರಾದ ಬೂದಿತಿಟ್ಟು ರಾಜೇಂದ್ರ, ಸಿದ್ದಯ್ಯ, ಸಿದ್ದೇಶ್ ಹಾಗೂ ಇನ್ನಿತರರಿದ್ದರು.