ಕೊಳ್ಳೇಗಾಲ ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನನ್ನ ಖಾತೆಯಲ್ಲಿರುವ ಹಣ ನೀಡುವಂತೆ ಆಗ್ರಹಿಸಿ ಬ್ಯಾಂಕ್ ಮುಂಭಾಗ ದೇವೆಂದ್ರಪ್ಪ ಮಲಗಿ ಪ್ರತಿಭಟನೆ ನಡೆಸಿದರು. 
ಚಾಮರಾಜನಗರ

ಖಾತೆಯಲ್ಲಿರುವ ಹಣ ವಾಪಸಿಗೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • money in account
ಕೊಳ್ಳೇಗಾಲ: ನನ್ನ ಖಾತೆಯಲ್ಲಿರುವ 15 ಲಕ್ಷ ರೂ. ನೀಡುವಂತೆ ಆಗ್ರಹಿಸಿ ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯ ಮುಂಭಾಗ ವ್ಯಕ್ತಿಯೊಬ್ಬರು ಮಲಗಿ ಸಾಂಕೇತಿಕವಾಗಿ ಮಂಗಳವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಕಾಮಗೆರೆ ಗ್ರಾಮದ ದೇವೆಂದ್ರಪ್ಪ ಬ್ಯಾಂಕ್ ಸಮಯದಲ್ಲಿ ಗೇಟ್ ಮುಂಭಾಗ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ನನಗೆ ಸೇರಿದ 15 ಲಕ್ಷ ರೂ. ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಸ್‌ಬಿ ಹಾಗೂ ಎಫ್‌ಡಿ ಖಾತೆಯಲ್ಲಿದೆ. ಹಲವು ಭಾರಿ ಕಚೇರಿಗೆ ಆಗಮಿಸಿ ನನ್ನ ಹಣ ನೀಡುವಂತೆ ಕೇಳಿದರೂ ನೀಡುತ್ತಿಲ್ಲ. ಹಾಗಾಗಿ ಕಚೇರಿ ಮುಂಭಾಗ ಮಲಗಿ ಪ್ರತಿಭಟನೆ ಮಾಡುತ್ತಿದ್ದೇನೆ. ನನ್ನ ಹಣ ವಾಪಸ್ ಕೊಡದಿದ್ದರೆ ಮೇಲಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು ಎರಡು ಗಂಟೆಗಳ ಕಾಲ ಮಲಗಿ ಪ್ರತಿಭಟಿಸಿ ಎಚ್ಚರಿಕೆ ನೀಡಿದ್ದಾರೆ.