ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗ ಜೀತ ಮುಕ್ತರು ಗುರುವಾರ ಪ್ರತಿಭಟನೆ ನಡೆಸಿದರು. ಸಿದ್ದರಾಜು, ಮರಿಸ್ವಾಮಿ, ಮಹದೇವಯ್ಯ, ಗೋಪಾಲಯ್ಯ, ಕರಿಯಯ್ಯ, ದೊಡ್ಡಯ್ಯ ಇತರರು ಭಾಗವಹಿಸಿದ್ದರು. 
ಚಾಮರಾಜನಗರ

ಜೀತ ಮುಕ್ತ ಪತ್ರ ನೀಡಲು ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ರೂಟ್ಸ್ ಫ್ರೀಡಂ ಸಂಘಟನೆಯಿಂದ ಧರಣಿ
  • ಜೀತ ಮುಕ್ತ ಪತ್ರ ನೀಡಬೇಕೆಂದು ಒತ್ತಾಯ
ಚಾಮರಾಜನಗರ: ಯಳಂದೂರು ಮತ್ತು ಗುಂಡ್ಲುಪೇಟೆ ತಾಲೂಕುಗಳ ಜೀತ ಮುಕ್ತರಿಗೆ ಪತ್ರ ನೀಡಬೇಕೆಂದು ಒತ್ತಾಯಿಸಿ ರೂಟ್ಸ್ ಆ್ ಫ್ರೀಡಂ ಸಂಘಟನೆ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ನಮಗೆ ಜೀತ ಮುಕ್ತ ಪತ್ರ ನೀಡಬೇಕೆಂದು ಒತ್ತಾಯಿಸಿ ೋಷಣೆ ಕೂಗಿದರು. ಯಳಂದೂರು ತಾಲೂಕಿನಲ್ಲಿ 42 ಜೀತದಾಳುಗಳು ಮತ್ತು ಗುಂಡ್ಲುಪೇಟೆ ತಾಲೂಕಿನ 17 ಜೀತದಾಳುಗನ್ನು ಗುರುತಿಸಲಾಗಿದೆ. ಆದರೆ ಇವರಿಗೆ ಇನ್ನೂ ಬಿಡುಗಡೆ ಪತ್ರವನ್ನು ನೀಡಿಲ್ಲ. ಜೀವ ಮುಕ್ತ ಪತ್ರ ನೀಡದೆ ಇರುವುದರಿಂದ ಬದುಕು ನಡೆಸಲು ಸರ್ಕಾರದಿಂದ ಸೌಲಭ್ಯಗಳು ಸಿಗುತ್ತಿಲ್ಲವೆಂದು ಹೇಳಿದರು.
ಜೀತ ಪದ್ಧತಿ ಅನಿಷ್ಠ ಪದ್ಧತಿಯಾಗಿದ್ದು ಇದನ್ನು ಸಮಾಜದಿಂದ ಬೇರು ಸಮೇತ ಕಿತ್ತು ಹಾಕಲು ಉಪ ಉಪ ವಿಭಾಗ ಮಟ್ಟದಲ್ಲಿ ಜಾಗೃತಿ ಸಭೆಗಳನ್ನು ಮಾಡಬೇಕು. 5 ತಾಲೂಕುಗಳಲ್ಲಿ ಬೇರೆ ರಾಜ್ಯದಿಂದ ಬಂದಿರುವ ವಲಸೆ ಕಾರ್ಮಿಕರ ಸಮೀಕ್ಷೆ ಮಾಡಬೇಕು. ಯಳಂದೂರು ಮತ್ತು ಗುಂಡ್ಲುಪೇಟೆ ತಾಲೂಕಿನ 59 ಜೀತ ಮುಕ್ತರಿಗೆ ಪತ್ರ ಕೊಡಬೇಕು. ಬಿಡುಗಡೆ ಪತ್ರ ಸಿಕ್ಕಿರುವ ವಿಮುಕ್ತರಿಗೆ ಮಾಸಾಶನ ಕೊಡಬೇಕು ಎಂದು ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ವಿ.ಗೋಪಾಲ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ಡಾ.ರತ್ನಮ್ಮ, ರಾಜ್ಯ ಉಪಾಧ್ಯಕ್ಷ ರವೀಂದ್ರ, ನರಸಿಂಹಮೂರ್ತಿ, ಜಿಲ್ಲಾ ಸಂಚಾಲಕ ಕುನ್ನ ಹೊಳೆಯಯ್ಯ, ಯಳಂದೂರು ತಾಲೂಕಿನ ಮರಿಸ್ವಾಮಿ, ನಾಗರಾಜು, ಸಿದ್ದರಾಜು, ಪುಟ್ಟಬಸವಯ್ಯ, ಮಹದೇವಯ್ಯ, ಗುಂಡ್ಲುಪೇಟೆ ತಾಲೂಕಿನ ಗೋಪಾಲಯ್ಯ, ಕರಿಯಯ್ಯ, ದೊಡ್ಡಯ್ಯ, ಮಹದೇವಯ್ಯ, ಶಿವಯ್ಯ, ಗುರುಮಲ್ಲಪ್ಪ ಇದ್ದರು.