ಹನೂರು ಹಾಗೂ ಕೊಳ್ಳೇಗಾಲ ತಾಲೂಕಿನ ಬಾಬು ಜಗಜೀವನರಾಮ್ ಒಕ್ಕೂಟದ ಸಂಘದ ಪದಾಧಿಕಾರಿಗಳು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.  
ಚಾಮರಾಜನಗರ

ಒಳಮೀಸಲಾತಿ ಜಾರಿಗೆ ಆಗ್ರಹ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಬಾಬು ಜಗಜೀವನರಾಮ್ ಒಕ್ಕೂಟದ ಪದಾಧಿಕಾರಿಗಳು ಒತ್ತಾಯ
  • ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ
ಕೊಳ್ಳೇಗಾಲ: ಒಳಮೀಸಲಾತಿ ಜಾರಿಗೊಳಿಸುವಂತೆ ಹನೂರು ಹಾಗೂ ಕೊಳ್ಳೇಗಾಲ ತಾಲೂಕಿನ ಬಾಬು ಜಗಜೀವನ ರಾಮ್ ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದರು.
ಚಾಮರಾಜನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಹೊರಡುವ ಮೊದಲು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಗುರುವಾರ ಮಾಲಾರ್ಪಣೆ ಮಾಡಿ ಒಗ್ಗಟ್ಟು ಪ್ರದರ್ಶಿಸಿದರು. ಈ ವೇಳೆ ಒಕ್ಕೂಟದ ಸದಸ್ಯ ಪ್ರವೀಣ್ ಮಾತನಾಡಿ, ನಾಗಮೋಹನ್‌ದಾಸ್ ಅವರ ವರದಿಯನ್ನು ಸಿಎಂ ಸಿದ್ದರಾಮಯ್ಯ ಜಾರಿಗೊಳಿಸಬೇಕು. ಈ ಮೂಲಕ ಮಾದಿಗ ಸಮುದಾಯಕ್ಕೆ ಮೀಸಲಾತಿಯ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಬಾಬು ಜಗಜೀವನರಾಮ್ ಒಕ್ಕೂಟ ಸಂಘಗಳ ಜಿಲ್ಲಾ ಉಪಾಧ್ಯಕ್ಷ ಬಿ.ಸಿ ಸುರೇಶ್, ತಿಮ್ಮರಾಜೀಪುರ ದ್ವಾರಕಿ, ದೊಡ್ಡಯ್ಯ, ಕೊಳ್ಳೇಗಾಲ ತಾಲೂಕು ಬಾಬು ಜಗಜೀವನರಾಮ್ ಒಕ್ಕೂಟ ಸಂಘಗಳ ಅಧ್ಯಕ್ಷ ಬಿ.ಗೋಪಾಲ್, ಗೌರವಾಧ್ಯಕ್ಷ ಪಿ.ಶಿವಮಲ್ಲು, ಪ್ರಧಾನ ಕಾರ್ಯದರ್ಶಿ ಸಿ.ಮಧು, ಖಜಾಂಚಿ ಎನ್.ಮುತ್ತುರಾಜ್, ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಇತರರು ಇದ್ದರು.