ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿಯಲ್ಲಿರುವ ನಮ್ಮ ಸಂಘ ಕಚೇರಿ ಎದುರು ಸಮರ್ಪಕ ಅನಿಲ ಸರಬರಾಜಿಗೆ ಒತ್ತಾಯಿಸಿ ರೈತ ಸಂಘದ ಕಾರ್ಯಾಕರ್ತರು ಪ್ರತಿಭಟನೆ ನಡೆಸಿದರು. 
ಚಾಮರಾಜನಗರ

ಗ್ಯಾಸ್ ಸಿಲಿಂಡರ್ ಸರಬರಾಜಿಗೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಮೇಲುಕಾಮನಹಳ್ಳಿಯಲ್ಲಿರುವ ಎಜೆನ್ಸಿ ಎದುರು ಪ್ರತಿಭಟನೆ
ಗುಂಡ್ಲುಪೇಟೆ : ಸಮರ್ಪಕವಾಗಿ ಅಡುಗೆ ಅನಿಲ ಸರಬರಾಜು ಮಾಡುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ತಾಲೂಕಿನ ಮೇಲುಕಾಮನಹಳ್ಳಿಯಲ್ಲಿರುವ ಗ್ಯಾಸ್ ಎಜೆನ್ಸಿ ಎದುರು ಪ್ರತಿಭಟನೆ ನಡೆಸಿದರು.
ತಾಲೂಕಿನ ಕಾಡಂಚಿನ ವಿವಿಧ ಗ್ರಾಮಗಳ ಜನರು ಗುರುವಾರ ಮೇಲುಕಾಮನಹಳ್ಳಿಯಲ್ಲಿರುವ ನಮ್ಮ ಸಂಘದ ವತಿಯಿಂದ ನಡೆಸಲಾಗುತ್ತಿರುವ ಗ್ಯಾಸ್ ಎಜೆನ್ಸಿ ಎದುರು ಸಿಲಿಂಡರ್ ಇಟ್ಟು ಪ್ರತಿಭಟನೆ ನಡೆಸಿದರು.
ಅರಣ್ಯ ಇಲಾಖೆಯು ಕಾಡಂಚಿನ ಗ್ರಾಮಗಳ ಜನರು ಉರುವಲು ಬಳಕೆ ಮಾಡುವುದನ್ನು ತಪ್ಪಿಸಲು ಉಚಿತವಾಗಿ ಗ್ಯಾಸ್ ಕನೆಕ್ಷನ್ ನೀಡಿದೆ. ಆದರೆ ಇಲ್ಲಿ ತಿಂಗಳಾದರೂ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡದೆ ಬಳಕೆದಾರರು ತೊಂದರೆ ಎದುರಿಸುತ್ತಿದ್ದಾರೆ. ಪ್ರತಿ ದಿನವೂ ಗ್ರಾಹಕರು ತಮ್ಮ ಮನೆಯಿಂದ ಖಾಲಿ ಸಿಲಿಂಡರ್ ತರುತ್ತಿದ್ದರೂ ತುಂಬಿದ ಸಿಲಿಂಡರ್ ದೊರಕದಂತಾಗಿದೆ. ಇನ್ನಾದರೂ ಪ್ರತಿ ಮನೆಗಳಿಗೂ ಹಿಂದಿನಂತೆ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಎಜೆನ್ಸಿಯ ಸಿಬ್ಬಂದಿ ಗೃಹಬಳಕೆಯ ಸಿಲಿಂಡರ್ ಕೊರತೆಯಾಗಿಲ್ಲ. ಲೋಡ್ ಬರುವುದು ತಡವಾಗಿದ್ದರಿಂದ ಸ್ವಲ್ಪ ಸಮಸ್ಯೆಯಾಗಿದೆ. ಸದ್ಯದಲ್ಲಿಯೇ ಪ್ರತಿ ಗ್ರಾಮಗಳಿಗೂ ಸಿಲಿಂಡರ್ ಕಳಿಸಲಾಗುತ್ತದೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.