ಭೀಮಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ಕೆಸ್ತೂರು ಗ್ರಾಮದ ಡಿ. ಚಾಲೆಂಜರ್ಸ್ ತಂಡಕ್ಕೆ ಕಾಂಗ್ರೆಸ್ ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ ಕಪ್ ವಿತರಿಸಿದರು. 
ಚಾಮರಾಜನಗರ

ಡಿ.ಚಾಲೆಂಜರ್ಸ್ ತಂಡ ಪ್ರಥಮ

ಪ್ರಮುಖ ಮುಖ್ಯಾಂಶಗಳು

  • ಭೀಮಕಪ್ ಸೀಸನ್-6 ಪಂದ್ಯಾವಳಿ
ಯಳಂದೂರು: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಸಚಿನ್ ಮತ್ತು ತಂಡ ಆಯೋಜಿಸಿದ್ದ ಭೀಮಕಪ್ ಸೀಸನ್-6 ರಲ್ಲಿ ಕೆಸ್ತೂರು ಗ್ರಾಮದ ಡಿ.ಚಾಲೆಂಜರ್ಸ್ ತಂಡ ಪ್ರಥಮ ಸ್ಥಾನ ಪಡೆಯಿತು.
ಅಂಬೇಡ್ಕರ್ ಜಯಂತಿ ಅಂಗವಾಗಿ ಪ್ರತಿ ವರ್ಷವೂ ಇಲ್ಲಿ ಕ್ರಿಕೆಟ್ ಪಂದ್ಯ ಆಯೋಜನೆ ಮಾಡಲಾಗುತ್ತದೆ. ಈ ಬಾರಿಯೂ ಕೂಡ ಜಿಲ್ಲೆಯ ವಿವಿಧ ಗ್ರಾಮಗಳಿಂದ ಅನೇಕ ತಂಡಗಳು ಪಂದ್ಯದಲ್ಲಿ ಭಾಗವಹಿಸಿದ್ದವು. ಈ ಪೈಕಿ ಕೆಸ್ತೂರು ಗ್ರಾಮದ ಡಿ. ಚಾಲೆಂಜರ್ಸ್ ಹಾಗೂ ಇದೇ ಗ್ರಮದ ಬಾಸೈನ್ ತಂಡಗಳು ಫೈನಲ್ ತಲುಪಿತ್ತು. ಇದರಲ್ಲಿ ಡಿ.ಚಾಲೆಂಜರ್ಸ್ ತಂಡ ಸಂಘಟಿತ ಹೋರಾಟ ನಡೆಸಿ ಕಪ್‌ಅನ್ನು ತನ್ನದಾಗಿಸಿಕೊಂಡಿತು. ಬಾಸೈನ್ ತಂಡ ದ್ವಿತೀಯ ಸ್ಥಾನ ಪಡೆಯಿತು.
ವಿಜೇತ ತಂಡಕ್ಕೆ ಕಪ್ ವಿತರಣೆ ಮಾಡಿ ಮಾತನಾಡಿದ ಕಾಂಗ್ರೆಸ್ ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ, ಕೆಸ್ತೂರು ಗ್ರಾಮದ ಕೆಲ ಯುವಕರು ಪ್ರತಿ ವರ್ಷವೂ ಅಂಬೇಡ್ಕರ್ ಜಯಂತಿ ನಿಮಿತ್ತ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿದ್ದಾರೆ. ಯುವಕರಿಗೆ ಅಂಬೇಡ್ಕರ್ ಮಾದರಿಯಾಗಬೇಕು. ಅವರ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ಹಾದಿ ನಮಗೆ ಎಂದಿಗೂ ಸ್ಫೂರ್ತಿದಾಯಕವಾಗಿದೆ ಎಂದರು.
ಜಿ.ಎನ್.ಲೋಕೇಶ್, ಶಿಕ್ಷಕ ರಂಗನಾಥ್, ಗ್ರಾಪಂ ಮಾಜಿ ಸದಸ್ಯ ಗುರುಲಿಂಗ, ಕೇಶವಮೂರ್ತಿ, ಮಹೇಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್, ಪಂದ್ಯದ ಆಯೋಜಕರಾದ ಸಚಿನ್ ಇತರರಿದ್ದರು.