ಯಳಂದೂರು ಪಟ್ಟಣದ ಎಸ್‌ಬಿಐ ಬ್ಯಾಂಕ್ ಶುಕ್ರವಾರ ಬ್ಯಾಂಕ್ ಮುಷ್ಕರದ ಹಿನ್ನೆಲೆಯಲ್ಲಿ ಬಂದ್ ಆಗಿರುವುದು. 
ಚಾಮರಾಜನಗರ

ಬ್ಯಾಂಕ್ ಮುಷ್ಕರದಿಂದ ಗ್ರಾಹಕರು ಪರದಾಟ

ಯಳಂದೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬ್ಯಾಂಕ್ ಸಿಬ್ಬಂದಿ ಮುಷ್ಕರದ ಹಿನ್ನೆಲೆಯಲ್ಲಿ ಶುಕ್ರವಾರ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ವಾರಕ್ಕೆ 5 ದಿನ ಕೆಲಸದ ಪದ್ಧತಿ ಜಾರಿ, ಪಿಂಚಣಿ ಸಂಬಂಧಿತ ಪರಿಹಾರ ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ ಯೋಜನೆ ಜಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸೆ.11ರಂದು ಬ್ಯಾಂಕ್ ಸಿಬ್ಬಂದಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು ಬಂದ್ ಆಗಿದ್ದವು. ಸೆ.12ರಂದು ಎರಡನೇ ಶನಿವಾರ, ಸೆ.13ರಂದು ಭಾನುವಾರ ಹಾಗೂ ಸೆ.14ರಂದು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಸಾಲುಸಾಲು ರಜೆ ಇದೆ. ಇದರ ಅರಿವಿಲ್ಲದೆ ಶುಕ್ರವಾರ ಪಟ್ಟಣಕ್ಕೆ ಬಂದ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಅಲ್ಲದೆ ಕೆಲ ಎಟಿಎಂಗಳಲ್ಲೂ ಹಣವಿಲ್ಲದೆ ಇರುವುದರಿಂದ ಕೆಲ ಗ್ರಾಹಕರು ಪರದಾಡಿದರು.