ಗುಂಡ್ಲುಪೇಟೆ ಪಟ್ಟಣದಲ್ಲಿ ಕೇರಳಂ ಲಾಟರಿ ಮಾರಾಟ ಮಾಡುತ್ತಿದ್ದ ಮಹದೇವಸ್ವಾಮಿ
ಗುಂಡ್ಲುಪೇಟೆ : ಪಟ್ಟಣದ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕೇರಳಂ ಲಾಟರಿ ಮಾರಾಟ ಮಾಡುತ್ತಿದ್ದ ಇಬ್ಬರು ಹಾಗೂ ಎರಡುಕಡೆಗಳಲ್ಲಿ ಜೂಜಾಡುತ್ತಿದ್ದ ಐವರು ಆರೋಪಿಗಳ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣ ವಿವಿಧೆಡೆ ಕೇರಳಂ ಲಾಟರಿ ಮಾರಾಟಮಾಡುತ್ತಿದ್ದ ಚಾಮರಾಜನಗರ ತಾಲೂಕಿನ ಕೋಡಿಮೋಳೆಯ ನಾಗಶೆಟ್ಟಿ ಎಂಬಾತನಿಂದ 58 ಸಾವಿರ ರೂ. ಮುಖಬೆಲೆಯ 1156 ಲಾಟರಿ ಟಿಕೆಟ್‌ಗಳು, ಚಂದಕವಾಡಿ ಗ್ರಾಮದ ಮಹದೇವಸ್ವಾಮಿ ಎಂಬುವನಿಂದ 44 ಸಾವಿರ ರೂ. ಮುಖಬೆಲೆಯ 868 ಲಾಟರಿ ಟಿಕೆಟ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ತಾಲೂಕಿನ ಕೂತನೂರು ಗುಡ್ಡ ಸಮೀಪ ಇಸ್ಪೀಟು ಜೂಜಾಡುತ್ತಿದ್ದವರ ಮೇಲೆ ದಾಳಿ ನಡೆಸಿ 5 ಜನರನ್ನು ಬಂಧಿಸಲಾಗಿದೆ. ಪಣಕ್ಕಿಟ್ಟಿದ್ದ 15 ಸಾವಿರ ರೂಪಾಯಿಗಳನ್ನು ವಶಕ್ಕೆ ಪಡೆಯಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಬೊಮ್ಮಲಾಪುರ ಗ್ರಾಮದ ಹೊರವಲಯದಲ್ಲಿ ಜೂಜಾಡುತ್ತಿದ್ದ 4 ಜನರನ್ನು ಬಂಧಿಸಿ ಪಣಕ್ಕಿಟ್ಟಿದ್ದ 1 ಲಕ್ಷದ 20 ಸಾವಿರ ರೂಪಾಯಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ನಟೇಶ್, ಮಣಿ, ಬಸವ, ಶಿವು, ನವೀನ್ ಹಾಗೂ ನಂದೀಶ್ ಭಾಗಿಯಾಗಿದ್ದರು.