ಪಟ್ಟಣದ ಮಾನಸ ಕಾಲೇಜಿನಲ್ಲಿ ಈ ಭೂಮಿಯ ಕೊನೆ ಹಾಡು ಕಾದಂಬರಿ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಡಾ.ಬಿ. ಎಂ. ಲತಾ, ಅಂಶಿಪ್ರಸನ್ನ ಕುಮಾರ್, ಡಾ.ದತ್ತೇಶ್ ಕುಮಾರ್,ಡಾ.ಪಿ.ವಿ .ನಾಗರಾಜು, ಡಾ. ನಾಗಭೂಷಣ್ ಇತರರು ಇದ್ದರು 
ಚಾಮರಾಜನಗರ

ಮೌಲ್ಯಯುತ ಕಾರ್ಯಕ್ರಮ ರೂಪಿಸಿ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಸಂಶೋಧಕಿ ಡಾ.ಬಿ.ಎಂ. ಮಾಲಾ ಅಭಿಮತ
ಕೊಳ್ಳೇಗಾಲ: ಜನಪರ ಸಾಹಿತ್ಯ ಪರಿಷತ್ ಜನಮನ ಮುಟ್ಟುವಲ್ಲಿ ಮೌಲ್ಯಯುತ ಕಾರ್ಯಕ್ರಮ ರೂಪಿಸುತ್ತಿದೆ ಎಂದು ಮೈಸೂರಿನ ಮಾನಸ ಗಂಗೋತ್ರಿಯ ಸಂಶೋಧಕಿ ಡಾ.ಬಿ.ಎಂ. ಮಾಲಾ ಹೇಳಿದರು.
ಪಟ್ಟಣದ ಮಾನಸ ಕಾಲೇಜಿನಲ್ಲಿ ಮಂಗಳವಾರ ಅಯೋಜಿಸಿದ್ದ ಈ ಭೂಮಿಯ ಕೊನೆ ಹಾಡು ಕಾದಂಬರಿ ಬಿಡುಗಡೆ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಯುವ ಪೀಳಿಗೆ ಓದುವುದಕ್ಕೆ ಹೆಚ್ಚು ಆದ್ಯತೆ ನೀಡಬೇಕು, ಅಂಗವಿಕಲೆಯಾದ ನಾನು ರೇಡಿಯೊ ಆಲಿಸಿ 10ನೇ ತರಗತಿ ಪರೀಕ್ಷೆ ಬರೆಯಲು ಪ್ರೇರಣೆ ದಕ್ಕಿತು. ಶಿಕ್ಷಕರು ಮಕ್ಕಳ ಮನಸ್ಸು ಗೆಲ್ಲುವ ಗುರುಗಳಾಗಿ ಮಾರ್ಗದರ್ಶನ ಮಾಡುವಂತಾಗಬೇಕು, ಕಥೆ, ಕಾದಂಬರಿಗಳನ್ನು ಓದಿ, ಪ್ರೋತ್ಸಾಹಿಸಿ ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಅವರು ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಯುವ ಕವಿಗಳು, ಕಥೆಗಾರರನ್ನು ಯುವ ಪೀಳಿಗೆ ಪ್ರೋತ್ಸಾಹಿಸುವ ಕೆಲಸ ವಾಗಬೇಕು, ಯುವ ಪೀಳಿಗೆ ಪುಸ್ತಕ ಪತ್ರಿಕೆಗಳನ್ನು, ಕಥೆ, ಕಾದಂಬರಿಗಳನ್ನು ಕೊಂಡು ಓದುವುದರಿಂದ ಹಾಗೂ ಸತತ ಅದ್ಯಯನದಿಂದ ಜ್ಞಾನ ವೃದ್ಧಿಗೂ, ಸೃಜನಾತ್ಮಕ ಬರವಣಿಗೆಗೂ ಸಹಕಾರಿಯಾಗಲಿದೆ ಎಂದರು.
ಮಾನಸ ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕ ಡಾ.ಪಿ.ವಿ .ನಾಗರಾಜು, ಸಂಯೋಜನಾಧಿಕಾರಿ ಡಾ. ನಾಗಭೂಷಣ್, ಜನಪರ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ್ ಎಂ. ಚಿಕ್ಕಲ್ಲೂರು, ರಾಜ್ಯ ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ, ನಿಸರ್ಗ ಕಾಲೇಜಿನ ಪ್ರಾಂಶುಪಾಲ ಈ. ಜಗದೀಶ್, ಡಾ. ವಿ.ಯೋಗೀಂದ್ರ, ಸಾಹಿತಿ ಕುಮಾರ್ ಮನಿಯಶೆಟ್ಟಿ, ಶಿಕ್ಷಕ ಮಂಟೇಸ್ವಾಮಿ, ಸುಶ್ಮಿತ, ಚಂದನ , ಮೇಘನಾ ಇನ್ನಿತರಿದ್ದರು.
.