ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಸಿಡಿಮದ್ದು ತಿಂದ ಹಸುವಿನ ಬಾಯಿ ಸಿಡಿದುಹೋಗಿದೆ. 
ಚಾಮರಾಜನಗರ

ಸಿಡಿಮದ್ದು ಸ್ಫೋಟಕ್ಕೆ ಹಸು ಬಾಯಿ ಛಿದ್ರ

ಗುಂಡ್ಲುಪೇಟೆ: ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರವಾಗಿರುವ ಘಟನೆ ತಾಲೂಕಿನ ಸೋಮಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ನಂಜಪ್ಪ ಅವರ ಹಸು ತೀವ್ರವಾಗಿ ಗಾಯಗೊಂಡಿದೆ. ಹಂದಿಗಳ ಬೇಟೆಗೆ ಇರಿಸಿದ್ದ ಸಿಡಿಮದ್ದನ್ನು ಅರಿಯದೆ ಹಸು ತಿನ್ನಲು ಯತ್ನಿಸಿದಾಗ ಸಿಡಿಮದ್ದು ಸ್ಫೋಟಗೊಂಡು ಅದರ ಬಾಯಿ ಛಿದ್ರಗೊಂಡಿದೆ. ಹಸು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಹಸುವಿನ ನರಳಾಟ ಮನಕಲುಕಿಸುವಂತಿದೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ರೈತನಿಗೆ ಸೂಕ್ತ ಪರಿಹಾರ ಕೊಡಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.