ಹುಲಿ ದಾಳಿಯಿಂದ ಗಾಯಗೊಂಡ ಹಸು.
ಹನೂರು: ತಾಲೂಕಿನ ಕಾಡಂಚಿನ ಗ್ರಾಮ ಕೊಪ್ಪದಲ್ಲಿ ಗುರುವಾರ ಹುಲಿ ದಾಳಿಗೆ ಹಸುವೊಂದು ಗಾಯಗೊಂಡಿದೆ.
ಗ್ರಾಮದ ಗೋವಿಂದರಾಜು ಎಂಬುವರ ಹಸು ಅರಣ್ಯದಂಚಿನಲ್ಲಿ ಮೇಯಲು ತೆರಳಿತ್ತು. ಈ ವೇಳೆ ಹುಲಿಯೊಂದು ಹಸುವಿನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಅದೃಷ್ಟವಶಾತ್ ಹಸು ಹುಲಿಯಿಂದ ಪಾರಾಗಿ, ಗ್ರಾಮಕ್ಕೆ ಆಗಮಿಸಿದೆ. ಈ ಬಗ್ಗೆ ತಿಳಿದ ಗೋವಿಂದರಾಜು ಅವರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದರು. ಅವರು ಗಾಯಗೊಂಡ ಹಸುವಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ಪಶುಪಾಲನಾ ಇಲಾಖೆಗೆ ತಿಳಿಸಿದ್ದಾರೆ. ಆದರೆ ಸಂಬಂಧಪಟ್ಟ ವೈದ್ಯರು ಹಾಗೂ ಸಿಬ್ಬಂದಿ ಅಗತ್ಯ ಚಿಕಿತ್ಸೆ ನೀಡಿಲ್ಲ. ಇದರಿಂದ ಹಸು ಗಾಯದ ನೋವಿನಿಂದ ಮೇವನ್ನು ಮೇಯದೇ ನಿತ್ರಾಣಗೊಂಡಿದೆ. ಪಶುಪಾಲನಾ ಇಲಾಖೆಯ ಅಧಿಕಾರಿಗಳು ಆಗಮಿಸಿ ಅಗತ್ಯ ಚಿಕಿತ್ಸೆ ನೀಡುವಂತೆ ಗೋವಿಂದರಾಜು ಒತ್ತಾಯಿಸಿದ್ದಾರೆ.