ಶ್ರೀಮಧ್ಯ ರಂಗನಾಥಸ್ವಾಮಿ ದೇವಾಲಯದಲ್ಲಿ ಶಿವನಸಮುದ್ರ ಸಮೂಹ ದೇವಾಲಯಗಳ ಹುಂಡಿಗಳ ಹಣ ಎಣಿಕೆ ನಡೆಯಿತು.
ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರ ಸಮೂಹ ದೇವಾ ಲಯಗಳ ಹುಂಡಿಗಳ ಹಣ ಎಣಿಕೆ ನಡೆದಿದ್ದು, 20,57,570 ಲಕ್ಷ ರೂ. ಅರ್ಧ ಗ್ರಾಂ ಚಿನ್ನಭಾರಣ ಹಾಗೂ 6 ಗ್ರಾಂ ಬೆಳ್ಳಿ ಪದಾರ್ಥ ಸಂಗ್ರಹವಾಗಿದೆ.
ತಾಲೂಕಿನ ಶ್ರೀ ಮಧ್ಯರಂಗನಾಥಸ್ವಾಮಿ ದೇವ ಸ್ಥಾನ, ಶ್ರೀಆದಿಶಕ್ತಿ ಮಾರಮ್ಮ ದೇವಸ್ಥಾನ, ಶ್ರೀ ಪ್ರಸನ್ನ ಮೀನಾಕ್ಷಿ ಸೋಮೇಶ್ವರ ದೇವಸ್ಥಾನಗಳ 11 ಹುಂಡಿಗಳ ಎಣಿಕೆ ಕಾರ್ಯ ಉಪವಿ ಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಆದೇಶದ ಮೇರೆಗೆ ತಹಸೀಲ್ದಾರ್ ಬಸವರಾಜು ನೇತೃತ್ವದಲ್ಲಿ ಸೋಮವಾರ ನಡೆಯಿತು.
ಕಳೆದ 4 ತಿಂಗಳ ಅವಧಿಯಲ್ಲಿ ನಡೆದ ಕಾಣಿಕೆ ಎಣಿಕೆ ಕಾರ್ಯ ನಡೆದಿದ್ದು, ವಿಡಿಯೋ ಚಿತ್ರೀಕರಣ ಮಾಡಲಾಯಿತು. ಏಣಿಕೆಯಲ್ಲಿ ಸಂಗ್ರಹವಾದ ಹಣವನ್ನು ಕೊಳ್ಳೇಗಾಲದ ಕೋಟೇಕ್ ಬ್ಯಾಂಕ್ ನಲ್ಲಿ ಜಮಾ ಮಾಡಲಾಗಿದೆ. ಹುಂಡಿ ಹಣ ಎಣಿಕೆಯಲ್ಲಿ ಉಪತಹಸಿಲ್ದಾರ್ ವಿಜಯಕುಮಾರ್, ಮುಜರಾಯಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್, ರಾಜಸ್ವ ನಿರೀಕ್ಷಕ ನಿರಂಜನ್, ರಂಗಸ್ವಾಮಿ, ಗ್ರಾಮ ಆಡಳಿತ ಅಧಿಕಾರಿಗಳಾದ ರಾಜೇಶ್ ಮರಾಠ, ಪ್ರದೀಪ್, ಸತೀಶ್, ಮಮತ, ಜ್ಯೋತಿ, ಸವಿತಾ, ಕುಮಾರ, ಪ್ರಸಾದ್, ಅನಿಲ್, ವಿಷ್ಣು ಮತ್ತು ಕಸಬಾ ಹೋಬಳಿ ಪಾಳ್ಯ ಹೋಬಳಿ ಗ್ರಾಮ ಸಹಾಯಕಯರು, ಕೋಟೇಕ್ ಬ್ಯಾಂಕ್ ಸಿಬ್ಬಂದಿ ಗಂಗಾಧರ್ ಹಾಗೂ ದೇವಾಲಯದ ಅರ್ಚಕ ಮಾಧವನ್, ಚಿಕ್ಕರಾವಳಯ್ಯ, ನಾಗರಾಜು ದೀಕ್ಷಿತ್ ಇದ್ದರು.
ಎಣಿಕೆ ಪ್ರಕ್ರಿಯೆಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.