ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮದ ಪರಿಶಿಷ್ಟ ಜನಾಂಗದ ಬಡಾವಣೆಯಲ್ಲಿ 20 ಲಕ್ಷ ರೂ.ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಗಣೇಶ್ ಪ್ರಸಾದ್ ಭೂಮಿಪೂಜೆ ನೆರವೇರಿಸಿದರು. ಕೆ.ಎಲ್.ಚಂದ್ರಶೇಖರ್, ವೈ.ಎನ್.ರಾಜಶೇಖರ್, ನಾಗಮಲ್ಲಪ್ಪ, ಬಸವಣ್ಣ, ಹಾಲಮಾದನಾಯ್ಕ, ವಿಶ್ವನಾಥ ಇತರರು ಇದ್ದರು. 
ಚಾಮರಾಜನಗರ

ಕೊಡಸೋಗೆಯಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಹೇಳಿಕೆ
  • ಕಾಮಗಾರಿಗೆ ಭೂಮಿಪೂಜೆ

ಗುಂಡ್ಲುಪೇಟೆ:

ತಾಲೂಕಿನ ಕೊಡಸೋಗೆ ಗ್ರಾಮದ ಪರಿಶಿಷ್ಟ ಜನಾಂಗದ ಬಡಾವಣೆಯಲ್ಲಿ 20 ಲಕ್ಷ ರೂ.ಅನುದಾನದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಹೇಳಿದರು.

ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸದ್ಯ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಕೊಡಸೋಗೆ, ಬೊಮ್ಮಲಾಪುರ, ಅಂಕಹಳ್ಳಿ, ಬಾಚಹಳ್ಳಿ ಹಾಗೂ ಹೆಗ್ಗವಾಡಿ ಗ್ರಾಮಗಳಲ್ಲಿ ತಲಾ 20 ಲಕ್ಷ ರೂ.ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೊಡ್ದ ಗ್ರಾಮವಾದ ಬೊಮ್ಮಲಾಪುರಕ್ಕೆ ಮತ್ತಷ್ಟು ಅನುದಾನದಿಂದ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಬಗರ್‌ಹುಕುಂ ಸಮಿತಿ ಮಾಜಿ ಅಧ್ಯಕ್ಷ ಕೆ.ಎಲ್.ಚಂದ್ರಶೇಖರ್, ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ವೈ.ಎನ್.ರಾಜಶೇಖರ್, ಮುಖಂಡರಾದ ನಾಗಮಲ್ಲಪ್ಪ, ಬಸವಣ್ಣ, ಹಾಲಮಾದನಾಯ್ಕ, ವಿಶ್ವನಾಥ ಇತರರು ಇದ್ದರು.