ಯಳಂದೂರು ತಾಲೂಕು ಪಂಚಾಯಿತಿ ನೂತನ ಇಒ ಎ.ಬಿ.ವೇಣು ಅವರಿಗೆ ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಅಭಿನಂದನೆ ಸಲ್ಲಿಸಿದರು. ಸಂಘದ ಅಧ್ಯಕ್ಷ ಅಮ್ಮನಪುರ ಮಹೇಶ್, ರವಿಕುಮಾರ್ ಜಗದೀಶ್, ಯದುಗಿರಿ ಇದ್ದರು.  
ಚಾಮರಾಜನಗರ

ತಾಪಂ ನೂತನ ಇಒಗೆ ಅಭಿನಂದನೆ

ಯಳಂದೂರು: ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಎ.ಬಿ.ವೇಣು ಅವರನ್ನು ತಾಲೂಕು ಸರ್ಕಾರಿ ನೌಕರರ ಸಂಘದಿಂದ ಅಭಿನಂದನೆ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಅಮ್ಮನಪುರ ಮಹೇಶ್ ಮಾತನಾಡಿ, ಶಿಕ್ಷಕರ ವರ್ಗ ಹಾಗೂ ಎಲ್ಲ ಇಲಾಖೆಯ ಸರ್ಕಾರಿ ನೌಕರರ ಸಮಸ್ಯೆಗಳು, ವೇತನ ಸೇರಿದಂತೆ ಇತರ ಕೆಲಸ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ನೂತನ ಇಒ ಎ.ಬಿ.ವೇಣು, ತಾಲೂಕಿನ ಎಲ್ಲ ನೌಕರರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ನೌಕರರಿಗೆ ಸರ್ಕಾರದಿಂದ ಲಭಿಸುವ ಸೌಲಭ್ಯಗಳನ್ನು ನಿಗದಿತ ಅವಧಿಯೊಳಗೆ ಪೂರೈಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಜಗದೀಶ್, ಗೌರವಾಧ್ಯಕ್ಷ ಯದುಗಿರಿ, ಉಪಾಧ್ಯಕ್ಷ ವೇಲು, ಸಂಘಟನಾ ಕಾರ್ಯದರ್ಶಿ ಕೀರ್ತಿ, ಕೆಪಿಎಸ್ ಶಾಲೆ ಉಪಪ್ರಾಂಶುಪಾಲ ನಂಜುಂಡಯ್ಯ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸೋಮಣ್ಣ, ಕಾರ್ಯದರ್ಶಿ ನಾಗರಾಜು, ಶಿಕ್ಷಕರಾದ ನಂಜುಂಡಸ್ವಾಮಿ, ರುದ್ರಸ್ವಾಮಿ, ಸಿದ್ದರಾಜು, ವರದರಾಜು ಇತರರು ಇದ್ದರು.