ಹನೂರಿನ ತಹಸೀಲ್ದಾರ್ ಕಚೇರಿ ಆವರಣದ ಮುಂಭಾಗದಲ್ಲಿರುವ ಓವರ್‌ಹೆಡ್ ಟ್ಯಾಂಕ್ ತಳ ಭಾಗದಲ್ಲಿ ಬೆಳೆದಿದ್ದ ಗಿಡ ಗಂಟಿಗಳನ್ನು ತೆರವುಗೊಳಿಸಲಾಯಿತು. 
ಚಾಮರಾಜನಗರ

ಓವರ್‌ಹೆಡ್ ಟ್ಯಾಂಕ್ ಬಳಿ ಗಿಡ-ಗಂಟಿ ತೆರವು

ಹನೂರು: ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದ ಮುಂಭಾಗದಲ್ಲಿರುವ ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್‌ನ ತಳ ಭಾಗದಲ್ಲಿ ಬೆಳೆದಿದ್ದ ಗಿಡ ಗಂಟಿಗಳನ್ನು ಶನಿವಾರ ಪಟ್ಟಣ ಪಂಚಾಯಿತಿ ಸಿಬ್ಬಂದಿ ತೆರವುಗೊಳಿಸಿದರು.
ಪಟ್ಟಣದ ಕೆಲ ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಸುವ ಹಿನ್ನೆಲೆಯಲ್ಲಿ ಈ ಹಿಂದೆ ತಹಸೀಲ್ದಾರ್ ಕಚೇರಿ ಆವರಣದ ಮುಂಭಾಗದಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲಾಗಿತ್ತು. ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಟ್ಯಾಂಕ್‌ನ ತಳ ಭಾಗದಲ್ಲಿ ಗಿಡ-ಗಂಟಿಗಳು ಬೆಳೆದಿದ್ದವು. ಇದರಿಂದ ಅನೈರ್ಮಲ್ಯ, ಹಾವು, ಚೇಳುಗಳ ಆವಾಸ ಸ್ಥಳವಾಗಿತ್ತು. ಸ್ಥಾನವಾಗಿ ಮಾರ್ಪಟ್ಟಿತ್ತು. ಆದರೆ ಪಪಂ ಅಧಿಕಾರಿಗಳು ತೆರೆವುಗೊಳಿಸುವ ಕಾರ್ಯಕ್ಕೆ ಮುಂದಾಗಿರಲಿಲ್ಲ. ಈ ಬಗ್ಗೆ ತಹಸೀಲ್ದಾರ್ ಕಚೇರಿಗೆ ಆಗಮಿಸುವ ಸಾರ್ವಜನಿಕರಿಂದ ಆಕ್ಷೇಪ ಕೇಳಿ ಬಂದಿತ್ತು. ಪಪಂ ಮಾಜಿ ಉಪಾಧ್ಯಕ್ಷ ಬಸವರಾಜು ಗಿಡಗಂಟಿಗಳನ್ನು ತೆರೆವುಗೊಳಿಸುವಂತೆ ಒತ್ತಾಯಿಸಿದ್ದರು.
ಈ ಬಗ್ಗೆ ಜು.13 ರಂದು ವಿಜಯವಾಣಿ ಸಂಚಿಕೆಯಲ್ಲಿ ಗಿಡ, ಗಂಟಿ ತೆರೆವು ಮಾಡಲು ಆಗ್ರಹ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಪಪಂ ಅಧಿಕಾರಿಗಳು ಓವರ್‌ಹೆಡ್ ಟ್ಯಾಂಕ್ ತಳಭಾಗ ಹಾಗೂ ಸುತ್ತಲು ಬೆಳೆದಿದ್ದ ಗಿಡ-ಗಂಟಿಗಳನ್ನು ತೆರೆವುಗೊಳಿಸಿದ್ದಾರೆ.