ಚಾಮರಾಜನಗರದ ಾರೆಸ್ಟ್ ನರ್ಸರಿ ರಸ್ತೆಯಲ್ಲಿರುವ ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ ಬಸವ ಮನೆಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ನೀಡುವುದಕ್ಕೆ ಬುಧವಾರ ಚಾಲನೆ ನೀಡಲಾಯಿತು. ಗೌರಿಶಂಕರ್, ಹೊನ್ನಮೇಟಿ ಸುಂದರ್, ಡಾ.ಪರಮೇಶ್ವರಪ್ಪ, ನಾಗಮಲ್ಲಪ್ಪ, ಕೆ.ಎಸ್.ಮಹದೇವಸ್ವಾಮಿ ಇತರರು ಹಾಜರಿದ್ದರು.
- ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ ಜಯಂತಿ ಅಂಗವಾಗಿ ಕೊಡುಗೆ
- ಶುದ್ಧ ಉಚಿತ ಕುಡಿಯುವ ನೀರಿನ ಘಟಕಕ್ಕೆ ಚಾಲನೆ
ಚಾಮರಾಜನಗರ: ತುಮಕೂರು ಶ್ರೀಸಿದ್ಧಗಂಗಾ ಮಠದ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ 119 ನೇ ಜಯಂತಿ ಅಂಗವಾಗಿ ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ ವತಿಯಿಂದ ಬಸವ ಮನೆಯಲ್ಲಿ ಶುದ್ಧ ಉಚಿತ ಕುಡಿಯುವ ನೀರಿನ ಘಟಕಕ್ಕೆ ಬುಧವಾರ ಚಾಲನೆ ನೀಡಲಾಯಿತು.
ನಗರದ ಫಾರೆಸ್ಟ್ ನರ್ಸರಿ ರಸ್ತೆಯಲ್ಲಿರುವ ಬಸವ ಮನೆಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರು ತುಂಬಿಸುವ ಮೂಲಕ ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೌರಿಶಂಕರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕರ್ನಾಟಕದ 21ನೇ ಶತಮಾನದ ಬಸವಣ್ಣ ಎಂದೆ ಬಿಂಬಿತವಾಗಿದ್ದ ಶ್ರೀಸಿದ್ದಗಂಗಾಶ್ರೀಗಳ ಸೇವೆ ಅನನ್ಯ. ಶ್ರೀಮಠದಲ್ಲಿ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಜ್ಞಾನ, ಅನ್ನ, ದಾಸೋಹವನ್ನು ಕಲ್ಪಿಸಿ ಅವರ ಬಾಳಿಗೆ ಬೆಳಕು ನೀಡಿದ ಮಹಾಪುರುಷರು ಎಂದು ಬಣ್ಣಿಸಿದರು.
ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಸಂಗಮ ಗೃಹ ನಿರ್ಮಾಣ ಸಂಘದ ಉಪಾಧ್ಯಕ್ಷ ಹೊನ್ನಮೇಟಿ ಸುಂದರಪ್ಪ, ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು, ಸಹಕಾರ ಸಂಘದ ಉಪಾದ್ಯಕ್ಷ ಕುಮಾರಸ್ವಾಮಿ, ನಿರ್ದೇಶಕರಾದ ಡಾ.ಪರಮೇಶ್ವರಪ್ಪ, ಕೆ.ಎಸ್.ಮಹದೇವಸ್ವಾಮಿ, ಎಸ್.ಗುರುಸ್ವಾಮಿ, ಎಂ.ಲಿಂಗರಾಜಮೂರ್ತಿ, ಎಚ್.ಎಂ.ಗುರುಸ್ವಾಮಿ, ಬಿ.ನಾಗೇಂದ್ರ, ವಿ.ನಂಜುಂಡಸ್ವಾಮಿ, ಎನ್.ದೊರೆಸ್ವಾಮಿ, ಸಿ.ರಾಜಶೇಖರಮೂರ್ತಿ, ಪ್ರಮೀಳಾ, ನಾಗಮಣಿ, ಆರ್‌ಎಸ್.ಲಿಂಗರಾಜು, ಕಾರ್ಯದರ್ಶಿ ನಂಜುಂಡಸ್ವಾಮಿ, ಸಹಾಯಕ ಆಕಾಶ್ ಇತರರು ಇದ್ದರು.