ಗುಂಡ್ಲುಪೇಟೆ ತಾಲೂಕಿನ ರಾಘವಾಪುರದಲ್ಲಿ ನಡೆದ ಪಟ್ಟಲದಮ್ಮನವರ ರಥೋತ್ಸವದಲ್ಲಿ ಭಕ್ತರು ಉತ್ಸಾಹದಿಂದ ತೇರನ್ನು ಎಳೆದರು.
- ಮಹಿಳಾ ಪ್ರಧಾನವಾದ ಶ್ರೀ ಪಟ್ಟಲದಮ್ಮನವರ ರಥೋತ್ಸವ
ಗುಂಡ್ಲುಪೇಟೆ: ತಾಲೂಕಿನ ರಾಘವಾಪುರದಲ್ಲಿ ಮಹಿಳಾ ಪ್ರಧಾನವಾದ
ಶ್ರೀ ಪಟ್ಟಲದಮ್ಮನವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದಲ್ಲಿ ಶನಿವಾರ ಹಾಗೂ ಭಾನುವಾರ ನಡೆದ ಶ್ರೀ ಪಟ್ಟಲದಮ್ಮನವರ ರಥೋತ್ಸವದ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲ ಸಮುದಾಯಗಳ ಜನತೆ ಸೌಹಾರ್ದಯುತವಾಗಿ ಭಕ್ತಿ ಭಾವದಿಂದ ಆಚರಿಸಿದರು. ಗ್ರಾಮದ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಹಾಗೂ ತಳಿರು ತೋರಣಗಳಿಂದ ಅಲಂಕರಿಸಿದ್ದರು. ಸುಮಾರು 100 ಅಡಿ ಎತ್ತರದ ತೇರನ್ನು ವಿವಿಧ ಹೂವುಗಳಿಂದ ಅಲಂಕಾರಿಕ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಂಗಳ ವಾದ್ಯಗಳು, ಸತ್ತಿಗೆ, ಸುರಾಪಾನಿ ಸೇರಿದಂತೆ ವಿವಿಧ ಕಲಾತಂಡಗಳಿಂದ ಮಧ್ಯಾಹ್ನ ಮಹದೇಶ್ವರ ದೇವಸ್ಥಾನದ ಮುಂಭಾಗದಿಂದ ತೇರನ್ನು ಪುರುಷರು ಹಾಗೂ ಮಹಿಳೆಯರು ಎಳೆಯುತ್ತಾ, ತಾಯಿಗೆ ಹರಕೆ ತೀರಿಸುತ್ತಾರೆ ಇದು ಈ ರಥೋತ್ಸವದ ವಿಶೇಷವಾಗಿದೆ. ಹಲವಾರು ವರ್ಷಗಳಿಂದ ಮಹಿಳೆಯ ಅಚ್ಚುಮೆಚ್ಚಿನ ರಥೋತ್ಸವವಾಗಿ ತಾಯಿ ಪಟ್ಟಲದಮ್ಮನವರ ರಥೋತ್ಸವ ನಡೆಯುತ್ತದೆ.