ಎಚ್.ಎಸ್.ಬಸವರಾಜ್  
ಚಾಮರಾಜನಗರ

ರೈತರ ಆರ್ಥಿಕ ಪ್ರಗತಿಯ ಜೀವನಾಡಿ ಚಾಮುಲ್

ಪ್ರಮುಖ ಮುಖ್ಯಾಂಶಗಳು

  • ನಿರ್ದೇಶಕ ಎಚ್.ಎಸ್.ಬಸವರಾಜ್ ಅಭಿಮತ
  • ಹಾಲು ಒಕ್ಕೂಟವು ರೈತರ ಜೀವನಾಡಿಯಾಗಿದೆ.
  • ರೈತರ ಅರ್ಥಿಕ ಪ್ರಗತಿಯಲ್ಲಿ ಚಾಮುಲ್ ಸಹಕಾರ
ಚಾಮರಾಜನಗರ: ರೈತರ ಅರ್ಥಿಕ ಪ್ರಗತಿಗೆ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ಸಹಕಾರ ನೀಡುತ್ತಿದೆ. ನಂದಿನಿ ಹಾಲು ಹಾಗೂ ಉತ್ಪನ್ನಗಳನ್ನು ಎಲ್ಲರೂ ಬಳಸಬೇಕೆಂದು ಚಾಮುಲ್ ನಿರ್ದೇಶಕ ಎಚ್.ಎಸ್.ಬಸವರಾಜು ತಿಳಿಸಿದರು.
ನಗರದ ರಾಮಸಮುದ್ರ ಬಳಿಯ ಚಾಮುಲ್ ಉಪ ಕೇಂದ್ರದಲ್ಲಿ ಜಿಲ್ಲಾ ಹಾಲು ಒಕ್ಕೂಟ ಹೊರ ತಂದಿರುವ 2026ರ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಜಿಲ್ಲೆಯ ಅಭಿವೃದ್ದಿಯಲ್ಲಿ ತನ್ನದೇ ಆದ ಸೇವೆ ಸಲ್ಲಿಸುತ್ತಿರುವ ಹಾಲು ಒಕ್ಕೂಟವು ರೈತರ ಜೀವನಾಡಿಯಾಗಿದೆ. ರೈತರು ಕೃಷಿಯ ಜತೆಗೆ ಹೈನುಗಾರಿಕೆಯನ್ನು ಹೆಚ್ಚು ಅವಲಂಬಿಸಿದ್ದಾರೆ. ಇಂಥ ರೈತರ ಅರ್ಥಿಕ ಪ್ರಗತಿಯಲ್ಲಿ ಚಾಮುಲ್ ಸಹಕಾರ ನೀಡುತ್ತಿದೆ ಎಂದರು.
ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ ಮಾತನಾಡಿ, ಸಹಕಾರ ಸಂಘದ ಅಭಿವೃದ್ದಿಯಲ್ಲಿ ಡೇರಿಯ ನೌಕರರ ಪಾತ್ರ ಹೆಚ್ಚಿನದ್ದಾಗಿದೆ. ಪ್ರತಿ ದಿನ ಬೆಳಗ್ಗೆ ಹಾಗು ಸಾಯಂಕಾಲ ಗುಣಮಟ್ಟದ ಹಾಲು ಸಂಗ್ರಹಿಸಿ ಘಟಕಕ್ಕೆ ಕಳುಹಿಸುವ ಮೂಲಕ ತಮ್ಮದೇ ಅದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಹೇಳಿದರು. ಚಾಮುಲ್ ಉಪ ವ್ಯವಸ್ಥಾಪಕ ಡಾ.ಅಮರ್, ಮಾರ್ಗ ವಿಸ್ತಾರಣಾಧಿಕಾರಿ ಶ್ಯಾಮಸುಂದರ್, ತಾಲೂಕಿನ ಮಾರ್ಗ ವಿಸ್ತಾರಣಾಧಿಕಾರಿಗಳು, ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರು ಇದ್ದರು.