ಪಟ್ಟಣದ ಬೇತೇಲ್ ಲೂಥರನ್ ಚರ್ಚ್‌ನಲ್ಲಿ ಗುರುವಾರ ಹೊಸ ವರ್ಷದ ಹಿನ್ನೆಲೆಯಲ್ಲಿ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದರು.
ಕೊಳ್ಳೇಗಾಲ: ಪಟ್ಟಣದ ವಿವಿಧ ಚರ್ಚ್‌ಗಳಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಗುರುವಾರ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದರು. ಬ್ರದರನ್ ಚರ್ಚ್, ಬೇತೇಲ್ ಲೂಥರನ್ ಚರ್ಚ್, ಆರ್.ಸಿ ಚರ್ಚ್, ಎಸ್.ಡಿ.ಎ. ಚರ್ಚ್, ಅರುಣೋದಯ ಚರ್ಚ್ ಸೇರಿದಂತೆ ಇನ್ನಿತರ ಚರ್ಚ್‌ಗಳಲ್ಲಿ ಕ್ರೈಸ್ತರು ಸಾಮೂಹಿಕವಾಗಿ ಯೇಸು ಕ್ರಿಸ್ತನ ಆರಾಧನೆ ಮಾಡಿದರು.
ಬೇತೇಲ್ ಲೂಥರನ್ ಚರ್ಚ್‌ನಲ್ಲಿ ಸಭಾ ಪಾಲಕ ರೆವೆರೆಂಡ್ ಡಿ.ಜೆ.ಪ್ರಸನ್ನಕುಮಾರ್, ರೆವರೆಂಡ್ ಆಡೀಸ್ ಅರ್ನಾಲ್ಡ್ ಆರಾಧನೆ ನಡೆಸಿಕೊಟ್ಟರು. ಆರಾಧನೆಯ ಬಳಿಕ ಭಾನುವಾರದ ಸತ್ಯವೇದ ಶಾಲೆಯ ಮಕ್ಕಳ ಸ್ಪರ್ಧೆ ಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಈ ವೇಳೆ ಪಿಎಚ್.ಡಿ ಪದವಿ ಪಡೆದ ರೆವೆರೆಂಡ್ ನಂದಕುಮಾರ್ ಅವರನ್ನು ಸನ್ಮಾನಿಸಲಾಯಿತು, ನಂತರ ಹೊಸ ವರ್ಷದ ಹಿನ್ನೆಲೆಯಲ್ಲಿ ಭೋಜನ ಕೂಟ ಏರ್ಪಡಿಸಲಾಗಿತ್ತು. ಸಭಾ ಪಾಲನಾ ಸಮಿತಿಯ ಅಧ್ಯಕ್ಷ ಜಾನ್ ಪೀಟರ್, ಕಾರ್ಯದರ್ಶಿ ಆರ್.ಪಿ ನರೇಂದ್ರನಾಥ್, ಸಭಾ ಹಿರಿಯರು ಹಾಗೂ ಪದಾಧಿಕಾರಿಗಳು ಇದ್ದರು.