ಚಾಲಕ ನಿಯಂತ್ರಣ ತಪ್ಪಿ, ಮಗುಚಿದ ಆಟೋ
ಹನೂರು: ಪಟ್ಟಣದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಗುರುವಾರ ಆಟೋ ಚಾಲಕ ನಿಯಂತ್ರಣ ತಪ್ಪಿ, ಮಗುಚಿದ ಪರಿಣಾಮ ಐವರು ಗಾಯಗೊಂಡಿದ್ದಾರೆ.
ಕಲಬುರಗಿಯ ಕಾಂತ, ಯಾದಗಿರಿಯ ಬೀರಪ್ಪ, ರಾಯಚೂರಿನ ಮಲ್ಲೇಶ್, ರಮೇಶ್ ಹಾಗೂ ಬಸವರಾಜು ಗಾಯಗೊಂಡವರು.
ಹೊಸ ವರ್ಷದ ಹಿನ್ನೆಲೆಯಲ್ಲಿ ಬೆಳಗಿನ ಜಾವ ಮ.ಬೆಟ್ಟಕ್ಕೆ ಪ್ಯಾಸೆಂಜರ್ ಆಟೋದಲ್ಲಿ ತೆರಳುತ್ತಿದ್ದರು. ಪಟ್ಟಣದ ಹೊರವಲಯದ ಮುಖ್ಯರಸ್ತೆಯಲ್ಲಿ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಐವರು ಗಾಯಗೊಂಡಿದ್ದಾರೆ.